6 ವರ್ಷದ ಬಾಲಕಿಗೆ ಲಿವರ್ ಶಸ್ತ್ರ ಚಿಕಿತ್ಸೆ ಧನ ಸಹಾಯಕ್ಕೆ ಬಡ ಪೋಷಕರ ಮನವಿ

ದಾವಣಗೆರೆ, ಆ. 5 – 6 ವರ್ಷದ ಜಿ.ಶ್ರಾವಣಿ ತನ್ನ ಮಗಳಿಗೆ ತುರ್ತಾಗಿ ಲಿವರ್ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು, ವೈದ್ಯರು 25 ಲಕ್ಷ ರೂ. ಖರ್ಚಾಗಲಿದೆ ಎಂದು ತಿಳಿಸಿದ್ದಾರೆ. ದಾನಿಗಳು ಧನ ಸಹಾಯ ಮಾಡುವಂತೆ ಬಾಲಕಿಯ ತಂದೆ ತಳವಾರ ಕೇರಿ ನಿವಾಸಿ ಜಿ. ಗುರುಪ್ರಸಾದ್ ಮನವಿ ಮಾಡಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಿಸಿದಾಗಲೇ ಮಗಳು ಅನಾರೋಗ್ಯಕ್ಕೆ ತುತ್ತಾದಳು. ಇಲ್ಲಿಯವರೆಗೆ ಅವಳ ಚಿಕಿತ್ಸೆಗಾಗಿ 5 ಲಕ್ಷ ರೂ. ಖರ್ಚಾಗಿದೆ. ತುರ್ತಾಗಿ ಲಿವರ್ ಬದಲಿಸಬೇಕಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆ ವೈದ್ಯರು 25 ಲಕ್ಷ ರೂ. ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಅಡುಗೆ ಕೆಲಸ ಮಾಡುತ್ತಾ ಜೀವನ ನಡೆಸುತ್ತಿರುವ ನನಗೆ ಅಷ್ಟೊಂದು ಹಣ ಜೋಡಿಸಲು ಸಾಧ್ಯವಾಗುತ್ತಿಲ್ಲ ಎಂದರು.

ದಾನಿಗಳು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ  ಜಿ.ಗುರುಪ್ರಸಾದ್, ಖಾತೆ ಸಂಖ್ಯೆ 10590100009316, IFSC : PKGB0010590ಕ್ಕೆ ಹಣ ಹಾಕಬಹುದು ಎಂದವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಗುವಿನ ತಾಯಿ ವಿದ್ಯಾಶ್ರೀ, ಎಸ್.ರಾಜು, ಎಸ್.ವೆಂಟೇಶ್ ಇದ್ದರು.

error: Content is protected !!