ನಗರದಲ್ಲಿ ಇಂದು ಶ್ರೀ ಶಿವಾನಂದ ತೀರ್ಥಗುರುಗಳ ಜಯಂತ್ಯೋತ್ಸವ

ಜಯದೇವ ಸರ್ಕಲ್‌ನಲ್ಲಿರುವ ಶ್ರೀ ಶಿವಾನಂದ ತೀರ್ಥಗುರು ಆಧ್ಯಾತ್ಮ ಮಂದಿರದಲ್ಲಿ (ಶ್ರೀಗರು ದತ್ತಾತ್ರೇಯ ದೇವಾಲಯ) ಶ್ರೀಮತ್ಪರಮಹಂಸೇತ್ಯಾದಿ ಶ್ರೀ ಶಿವಾನಂದ ತೀರ್ಥಗುರುಗಳವರ ಜಯಂತ್ಯೋತ್ಸವ ಇಂದು ನಡೆಯಲಿದೆ. 

ಬೆಳಿಗ್ಗೆ 6ಕ್ಕೆ ಶ್ರೀ ಗುರುಗಳವರ ಪಾದುಕೆಗೆ ಕಾಕಡಾರತಿ, ಮಂಗಳಸ್ನಾನ, ಶ್ರೀ  ಗಣಪತಿ ಸ್ಮರಣೆ, ಶ್ರೀ ವೀರಾಂಜನೇಯ ಸ್ವಾಮಿಗೆ ಪೂಜೆ, ಬೆಳಿಗ್ಗೆ 10ಕ್ಕೆ ಶ್ರೀ ಗುರುಗಳವರ ಪಾದುಕೆಗೆ ಲಘುನ್ಯಾಸಪೂರ್ವಕ ಏಕದಶವರ್ತನ ರುದ್ರಾಭಿಷೇಕ, 12ಕ್ಕೆ ಶ್ರೀ ಶಿವಾನಂದ ತೀರ್ಥಗುರುಗಳವರ ತೊಟ್ಟಿಲೋತ್ಸವ, ಮಧ್ಯಾಹ್ನ 1 ಕ್ಕೆ  ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ. ಸಂಜೆ 6 ರಿಂದ 7ರವರೆಗೆ ಶ್ರೀ ವಾಸವಿ ಭಜನಾ ಮಂಡಳಿ ಹಾಗೂ ತಂಡದವರಿಂದ ಭಜನೆ, ತೀರ್ಥಪ್ರಸಾದ ವಿನಿಯೋಗವಿರುತ್ತದೆ.

error: Content is protected !!