ಭೈರನಪಾದ ಏತ ನೀರಾವರಿಯ ಹೊಸ ಡಿಪಿಆರ್ ತಯಾರಿಸಲು ಸ್ಥಳ ಪರಿಶೀಲನೆ

ಭೈರನಪಾದ ಏತ ನೀರಾವರಿಯ ಹೊಸ ಡಿಪಿಆರ್ ತಯಾರಿಸಲು ಸ್ಥಳ ಪರಿಶೀಲನೆ

ಮಲೇಬೆನ್ನೂರು, ಜು.30- ಹರಿಹರ ತಾಲ್ಲೂಕಿನ ಮಹತ್ವಾಕಾಂಕ್ಷೆಯ ಭೈರನಪಾದ ಏತ ನೀರಾವರಿ ಯೋಜನೆಯ ಹೊಸ ಡಿಪಿಆರ್ ತಯಾರಿಸಲು ಕರ್ನಾಟಕ ನೀರಾವರಿ ನಿಗಮದ ಎಂಡಿ ನೇಮಿಸಿರುವ ಬೆಂಗಳೂರಿನ ಪಿ.ಇ. ಏಜೆನ್ಸಿಯ ಇಂಜಿನಿಯರ್‌ಗಳು ಹಾಗೂ ತಾಂತ್ರಿಕ ತಂಡವು ಮಂಗಳವಾರ ಗೋವಿನಹಾಳ್ ಗ್ರಾಮದ ಸಮೀಪ ಇರುವ ತುಂಗಭದ್ರಾ ನದಿಯ ಭೈರನಪಾದ ಸ್ಥಳ ಪರಿಶೀಲನೆ ನಡೆಸಿದರು. 

ನದಿಯಿಂದ ನೀರು ಲಿಫ್ಟ್ ಆಗಿ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ತಲುಪುವ ನಾಲೆಯನ್ನು ವೀಕ್ಷಿಸಿದರು. 

ಈ ವೇಳೆ ಹಾಜರಿದ್ದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಹರಿಹರ ತಾಲ್ಲೂಕಿನ ರೈತರಿಗೆ ವರದಾನವಾಗಲಿರುವ ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಳಿಸಲು ಕಾಗಿನೆಲೆ ಶ್ರೀಗಳ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು, ತುಂಬಾ ಆಸಕ್ತಿ ವಹಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಡಿಪಿಆರ್‌ಗೆ ಸೂಚನೆ ನೀಡಿದ ತಕ್ಷಣವೇ ನೀರಾವರಿ ನಿಗಮದ ಎಂಡಿ ಅವರು ಏಜೆನ್ಸಿ ಫಿಕ್ಸ್ ಮಾಡಿ, ಕಾರ್ಯ ಆರಂಭಿಸಿದ್ದಾರೆ. ಹಾಗಾಗಿ ಈ ವರ್ಷದಲ್ಲೇ ಕಾಮಗಾರಿಗೆ ಚಾಲನೆ ಸಿಗುವ ವಿಶ್ವಾಸ ಇದೆ ಎಂದು ಶ್ರೀನಿವಾಸ್ ಹೇಳಿದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಭದ್ರಾ ಕಾಡಾ ಮಾಜಿ ಸದಸ್ಯ ಗೋವಿನಹಾಳ್ ರಾಜಣ್ಣ, ಗಂಗಾಮತ ಸಮಾಜದ ಮುಖಂಡ ಚಂದ್ರಪ್ಪ, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!