ಹರಿಹರ : ಕಾರ್ಯ ದಿನಗಳಿಗೆ ಗಳಿಕೆ ರಜೆ ನೀಡುವಂತೆ ಶಿಕ್ಷಕರ ಆಗ್ರಹ

ಹರಿಹರ : ಕಾರ್ಯ ದಿನಗಳಿಗೆ ಗಳಿಕೆ ರಜೆ ನೀಡುವಂತೆ ಶಿಕ್ಷಕರ ಆಗ್ರಹ

ಹರಿಹರ, ಜು. 29 – ತಾಲ್ಲೂಕಿನ ಅನುದಾನಿತ ಶಿಕ್ಷಕರು ಬಿಎಲ್ಓ ಆಗಿ ಕಾರ್ಯನಿರ್ವ ಹಿಸಿದ ಕಾರ್ಯ ದಿನಗಳಿಗೆ, ಗಳಿಕೆ ರಜೆ ನೀಡುವಂತೆ ಆಗ್ರಹಿಸಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ತಹಶೀಲ್ದಾರ್ ಗುರುಬಸವರಾಜ್ ರವರಿಗೆ ಮನವಿ ಅರ್ಪಿಸಿದರು.

 ಈ ವೇಳೆ ಮಾತನಾಡಿದ ಶಿಕ್ಷಕರ ಸಂಘದ ಮುಖಂಡರು ಹರಿಹರ ತಾಲ್ಲೂಕಿನಲ್ಲಿ 28 ಅನುದಾನಿತ ಶಾಲೆಗಳಲ್ಲಿ ಅನೇಕ ಶಿಕ್ಷಕರು ಬಿ.ಎಲ್.ಓ ಆಗಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಅದರಲ್ಲಿ ಚುನಾವಣಾಧಿಕಾರಿಗಳ ಆದೇಶದಂತೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಾಲ್ಲೂಕಿನ ಮತದಾನ ಪ್ರಮಾಣ ಹೆಚ್ಚಳಕ್ಕೆ ಬಿ.ಎಲ್.ಓ ಶಿಕ್ಷಕರು ಕಾರಣರಾಗಿದ್ದು, ನಮ್ಮ ಇಲಾಖೆಯ ರಜಾ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜಾ ನೀಡಲು ಅವಶ್ಯವಿದ್ದು,  ಆದ್ದರಿಂದ ಕರ್ನಾಟಕದ ಇತರೆ ತಾಲ್ಲೂಕುಗಳ ಬಿ.ಎಲ್‌.ಓ ಶಿಕ್ಷಕರಿಗೆ ಗಳಿಕೆ ರಜೆ ನೀಡಿ ಆದೇಶ ನೀಡಿದ್ದು, ಅದರಂತೆ ಇಲ್ಲಿನ ಶಿಕ್ಷಕರಿಗೆ ಗಳಿಕೆ ರಜೆ ನೀಡುವಂತೆ ಆಗ್ರಹಿಸಿದರು. 

ಈ ಸಂದರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ ದೊಗ್ಗಳ್ಳಿ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ, ತಾಲ್ಲೂಕು ಅನುದಾನಿತ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಟಿ. ಮಂಜಪ್ಪ, ಕಾರ್ಯದರ್ಶಿ ವಿ.ಬಿ. ತಿಪ್ಪೇಶ್, ಸಂಘಟನಾ ಕಾರ್ಯದರ್ಶಿ ಎ.ಸಿ. ಹನುಮಗೌಡ್ರು, ಉಪಾಧ್ಯಕ್ಷೆ ಲೀಲಾವತಿ, ಶಿಕ್ಷಕರಾದ ನಿರಂಜನ ಭಾನುವಳ್ಳಿ, ವೀರಪ್ಪ, ಹಿರಮಠ್, ಬಸವನಗೌಡ, ರಮೇಶ್, ರಾಜಪ್ಪ, ಧರ್ಮಪ್ಪ, ಇತರರು ಹಾಜರಿದ್ದರು.

error: Content is protected !!