ಹರಿಹರ, ಜು.28- ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನೂ ಕಲಿತರೆ ಪರಿಪೂರ್ಣ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬೇಬಿ ಸುನೀತಾ ತಿಳಿಸಿದರು.
ಕೊಂಡಜ್ಜಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಬಹುಜನ ಸಮಾಜ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೊನ್ನೆ ಏರ್ಪಡಿಸಲಾಗಿದ್ದ ಸಂಸ್ಕೃತಿ ಸಂಭ್ರಮದ ಅಂಗವಾಗಿ ಹೆಗ್ಗೆರೆ ರಂಗಪ್ಪ ಮತ್ತು ಸಂಗಡಿಗರಿಂದ ನಡೆಸಲಾದ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಈ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ. ಹೆಚ್. ಗಾಯತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಎಂ.ಆಂಜನೇಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು, ದೀಪು ಆರ್.ಹೆಗ್ಗೆರೆ, ಹರ್ಷಿತ ಕಾವಾಡಿ, ಯಮುನಾ ಕಾವಾಡಿ ಸುಗಮ ಸಂಗೀತ ಗಾಯನ ಮಾಡಿದರು.
ಹುಲ್ಲುಕಟ್ಟೆ ರಂಗಸ್ವಾಮಿ (ಕೀ ಬೋರ್ಡ್), ಹಾಲೇಶ್ (ತಬಲಾ), ದಿನೇಶ್ ಮಾಚೇನಹಳ್ಳಿ (ಹಾರ್ಮೋನಿಯಂ) ನುಡಿಸಿದರು. ವಿಶೇಷವಾಗಿ ಶ್ರೀರಾಮಪುರದ ಪಾಂಡುರಂಗಪ್ಪ ಶಶಿಕಲಾ ಸಂಗಡಿಗರಿಂದ ಸ್ಯಾಕ್ಸೋ ಫೋನ್ ವಾದನವನ್ನು ಏರ್ಪಡಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಜಿ.ಎನ್. ರೂಪಕಲಾ ವಹಿಸಿದ್ದರು. ದಾವಣಗೆರೆ ಟೀಮ್ ಅಕಾಡೆಮಿ ಉಪನ್ಯಾಸಕ ನಾಗೇಂದ್ರ ಇತರರು ಉಪಸ್ಥಿತರಿದ್ದರು.