ದಾವಣಗೆರೆ, ಜು. 28- ಗುರು ಎಂದರೆ ಕೇವಲ ವ್ಯಕ್ತಿಯಲ್ಲ ಅದೊಂದು ಶಕ್ತಿ ಎಂಬಂತೆ ಗುರು ಪೂರ್ಣಿಮೆಯ ಅಂಗವಾಗಿ ನಗರದ ಸೇಂಟ್ಜಾನ್ಸ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಮಾತಾ – ಪಿತೃಗಳಿಗೆ ವಂದನಾ ಕಾರ್ಯಕ್ರಮ ವನ್ನು ನಡೆಸಲಾಯಿತು.
ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ತಂದೆ ತಾಯಿಗಳ ಬಗ್ಗೆ ಗೌರವ ಕಡಿಮೆಯಾ ಗುತ್ತಿದ್ದು, ತಂದೆ-ತಾಯಿಗಳ ಮಹತ್ವದ ಅರಿವು ಮೂಡಿ ಸಲು ಮಾತೃ ಪಿತೃ ವಂದನಾ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಅರ್ಥ ಪೂರ್ಣವಾಗಿ ಚಾಲನೆ ನೀಡಲಾಯಿತು.
ಮಾತೃಪಿತೃ ವಂದನಾ ಕಾರ್ಯಕ್ರಮದ ಪೂಜಾ ವಿಧಿಯನ್ನು ಶಾಸ್ತ್ರ ಬದ್ಧವಾಗಿ ಪುರೋಹಿತ ಬನ್ನಯ್ಯನವರು ನೆರವೇರಿಸಿದರು.
ಸೇಂಟ್ ಜಾನ್ಸ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ, ಖಾಸಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎಂ. ಉಮಾಪಯ್ಯ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ, ನಿತ್ಯವೂ ನೀವು ದೇವರನ್ನು ಕಾಣಲಾರಿರಿ. ನಿಮ್ಮ ಮುಂದೆ ಕಾಣುವ ಪ್ರತ್ಯಕ್ಷ ದೇವರೆಂದರೆ ತಂದೆ-ತಾಯಿಗಳು. ನೀವು ಅವರ ಮಾತನ್ನು ಪಾಲಿಸಿರಿ ಎಂದು ತಿಳಿ ಹೇಳಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹೆಚ್. ಅನಿಲ್ಕುಮಾರ್, ಖಜಾಂಚಿ ಪ್ರವೀಣ್ ಹುಲ್ಲುಮನೆ, ಪ್ರಾಂಶುಪಾಲರಾದ ಸೈಯದ್ ಆರಿಫ್ ಆರ್., ಶ್ರೀಮತಿ ಪ್ರೀತಾ ಟಿ. ರೈ, ಉಪ ಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.