ಹೈನುಗಾರಿಕೆ ಪ್ರೋತ್ಸಾಹಕ್ಕೆ ಬಡ್ಡಿ ಸಹಾಯ ಧನ ಯೋಜನೆ

ದಾವಣಗೆರೆ, ಜು. 28 – ರೈತ ಮಹಿಳೆಯರಿಗೆ ಹೈನುಗಾರಿಕೆಯಲ್ಲಿ ಪ್ರೋತ್ಸಾಹಿಸಲು ಹಸು, ಎಮ್ಮೆ ಖರೀದಿಗೆ ಪಡೆಯುವ ಸಾಲದ ಮೇಲಿನ ಬಡ್ಡಿಯನ್ನು ಸಕಾಲದಲ್ಲಿ ಮರುಪಾವತಿಸುವ ಮಹಿಳಾ ಫಲಾನುಭವಿಗಳಿಗೆ (ಪ್ರತಿ ಜೂನ್-30, ಸೆಪ್ಟೆಂಬರ್-30, ಡಿಸೆಂಬರ್-30, ಮಾರ್ಚ್ 31) ಸರ್ಕಾರದಿಂದ ಶೇ.9ರ ಪ್ರತಿ ತ್ರೈಮಾಸಿಕಕ್ಕೆ ಬಡ್ಡಿ ಸಹಾಯ ಧನ ನೀಡುವ ಯೋಜನೆ ಜಾರಿಯಲ್ಲಿದೆ.

ದಾವಣಗೆರೆ ಜಿಲ್ಲೆಯ ತಾಲ್ಲೂಕುಗಳಿಗೆ ಮರು ಹಂಚಿಕೆ ಮಾಡಲಾದ ಗುರಿಗಳಂತೆ ಅರ್ಹ ಫಲಾನುಭವಿಗಳು ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು ಹಾಗೂ ಸ್ಥಳೀಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು.

ಚನ್ನಗಿರಿ ತಾಲ್ಲೂಕು ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಮೊ.ಸಂ 9880961745, ದಾವಣಗೆರೆ ತಾಲ್ಲೂಕು ಮೊ.ಸಂಖ್ಯೆ 93535 67572, ಹರಿಹರ ತಾಲ್ಲೂಕು ಮೊ.ಸಂ 9900369113, ಹೊನ್ನಾಳಿ ತಾಲ್ಲೂಕು ಮೊ.ಸಂ 9480506320, ಜಗಳೂರು ತಾಲ್ಲೂಕು ಮೊ.ಸಂ 9901641942, ನ್ಯಾಮತಿ ತಾಲ್ಲೂಕು ಮೊ.ಸಂ 9632916405.

error: Content is protected !!