ದಾವಣಗೆರೆ, ಜು. 28 – ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 26ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮೋತ್ತೇಜಕ ಕಾರ್ಯಕ್ರಮವು ನಾಡಿದ್ದು ದಿನಾಂಕ 30 ರಿಂದ ಆಗಸ್ಟ್ 3ರವರೆಗೆ 5 ದಿನಗಳ ಕಾಲ ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಆಯೋಜನೆಗೊಂಡಿದೆ.
ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆಯ ಜಿಲ್ಲಾ ಘಟಕದ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರೂ ಆದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ದೇವರಮನೆ ಶಿವಕುಮಾರ್ ಮತ್ತು ಶ್ರೀ ಜಗದ್ಗುರು ರೇಣುಕಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್ ಅವರುಗಳು `ಜನತಾವಾಣಿ’ಗೆ ತಿಳಿಸಿದ್ದಾರೆ.
5 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 8.30ಕ್ಕೆ ಇಷ್ಟಲಿಂಗ ಪೂಜೆ ಮತ್ತು ಪ್ರತಿದಿನ ಸಂಜೆ 6.30ಕ್ಕೆ ಧರ್ಮೋತ್ತೇಜಕ ಸಮಾರಂಭಗಳು ಏರ್ಪಾಡಾಗಿವೆ. ರಂಭಾಪುರಿ ಪೀಠದ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶೀ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಈ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಐದೂ ದಿನಗಳಂದು ಶ್ರೀ ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘದಿಂದ ಧ್ವಜ ವಂದನೆ, ಹರಿಹರದ ಸಂಗೀತ ಶಿಕ್ಷಕ ಗಾನಕಲಾ ರತ್ನ ಕಾಂತರಾಜ್ ಅವರಿಂದ ಪ್ರಾರ್ಥನೆ ಮತ್ತು ಸಂಗೀತ, ಹರಿಹರದ ವೀರೇಶ್ ಬಿ. ಬಡಗೆರೆ ಅವರಿಂದ ತಬಲಾ ಸೇವೆ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 30ರ ಮಂಗಳವಾರ ಸಂಜೆ 6.30ಕ್ಕೆ ಏರ್ಪಾಡಾಗಿರುವ ಸಮಾರಂಭದಲ್ಲಿ ಹರಪಹಳ್ಳಿ ತೆಗ್ಗಿನಮಠ ಸಂಸ್ಥಾನದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು. ನೇತೃತ್ವ : ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, (ಗವಿಮಠ, ಕಣ್ವಕುಪ್ಪಿ). ಶಾಸಕರೂ ಆದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಘಟಕದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಇದೇ ಸಂದರ್ಭದಲ್ಲಿ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ. ಕೆ.ಸಿ. ಶಿವಮೂರ್ತಿ ಅವರಿಗೆ `ವೈದ್ಯ ಚಿಂತಾಮಣಿ’ ಬಿರುದಿನೊಂದಿಗೆ ಗೌರವ ಶ್ರೀರಕ್ಷೆ, ಪ್ರಶಸ್ತಿ ಪ್ರದಾನ ಮಾಡಲಾಗುವುದು. ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಘಟಕದ ಉಪಾಧ್ಯಕ್ಷರುಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಎಸ್. ಗಣೇಶ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ದಾವಣಗೆರೆ ಹರಿಹರ ಅರ್ಬನ್ ಕೋ ಆಪ್ ಬ್ಯಾಂಕ್ನ ಮಾಜಿ ಉಪಾಧ್ಯಕ್ಷ ಎಸ್.ಕೆ. ವೀರಣ್ಣ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಗುರು ರಕ್ಷೆ : ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶಿವಲೀಲಾ ಎನ್.ಎಂ. ಕೊಟ್ರಯ್ಯ, ಗಿರೀಶ್ ಗೌಡ್ರು (ಕಕ್ಕರಗೊಳ್ಳ), ಶ್ರೀಮತಿ ಮೇಘ ಮಂಜುನಾಥ್ ಶಿವಶೆಟ್ಟರ್, ಕಂಟ್ರ್ಯಾಕ್ಟರ್ ಲಿಂಗರಾಜ ಬಸಾಪುರ, ಕೊಟ್ರಯ್ಯ (ಬಸಾಪುರ), ಕಾಂಗ್ರೆಸ್ ಮುಖಂಡ ಹುಲ್ಮನಿ ಗಣೇಶ್, ಡಿಹೆಚ್ಯುಸಿ ಬ್ಯಾಂಕ್ನ ಉಪ ಪ್ರಧಾನ ವ್ಯವಸ್ಥಾಪಕ ಕೆ.ಎಂ. ರುದ್ರಮುನಿ, ಶಿಕ್ಷಕರಾದ ಶ್ರೀಮತಿ ಮಂಜುಳ ಹೆಚ್.ಆರ್., ಹೆಚ್.ಎಂ.ಕ ರಿಬಸವಯ್ಯ, ವರ್ತಕ ಐಗೂರು ಪ್ರಭು, ತ್ಯಾವಣಿಗೆ ಮಲ್ಲಿಕಾರ್ಜುನ, ಲೆಕ್ಕ ಪರಿಶೋಧಕ ಚಂದ್ರಕಾಂತ್, ಬಿಜೆಪಿ ಮುಖಂಡ ಆರ್. ಲಕ್ಷ್ಮಣ, ಎಂಸಿಸಿ ಎ ಬ್ಲಾಕ್ನ ಡಿಹೆಚ್ಯುಸಿ ಬ್ಯಾಂಕ್ನ ವ್ಯವಸ್ಥಾಪಕ ಪರಮೇಶ್ವರಪ್ಪ, ಶಿವಾನಿ ಮೆಡಿಕಲ್ಸ್ನ ಡಿ.ಕೆ. ಮಾಲತೇಶ.
ದಿನಾಂಕ 31ರ ಬುಧವಾರ ಸಂಜೆ 6.30ಕ್ಕೆ ಏರ್ಪಾಡಾಗಿರುವ ಸಮಾರಂಭದಲ್ಲಿ ಶ್ರೀಮದ್ರಂಭಾಪುರಿ ಖಾಸಾ ಶಾಖಾ ಸಂಸ್ಥಾನ (ಮಳಲಿಮಠ)ದ ಶ್ರೀ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು. ನೇತೃತ್ವ : ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು, (ಎಡೆಯೂರು ಕ್ಷೇತ್ರ, ಉಪಾಧ್ಯಕ್ಷರು- ಅ.ಭಾ.ವೀ.ಶಿ.ಸಂಸ್ಥೆ (ರಿ.) ಬೆಂಗಳೂರು).
ಇದೇ ಸಂದರ್ಭದಲ್ಲಿ ಮಲೇಬೆನ್ನೂರಿನ ಖ್ಯಾತ ಕೈಗಾರಿಕೋದ್ಯಮಿ ಬಿ. ಚಿದಾನಂದಪ್ಪ ಅವರಿಗೆ `ಧರ್ಮ ರತ್ನಾಕರ’ ಬಿರುದಿನೊಂದಿಗೆ ಗೌರವ ಶ್ರೀರಕ್ಷೆ, ಪ್ರಶಸ್ತಿ ಪ್ರದಾನ ಮಾಡಲಾಗುವುದು. ಲೋಕಸಭಾ ಮಾಜಿ ಸದಸ್ಯ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಗುರು ರಕ್ಷೆ : ಬಿಜೆಪಿ ಮುಖಂಡ ಕೊಂಡಜ್ಜಿ ಜಯಪ್ರಕಾಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಹಿಂದೂ ಮಹಾಗಣಪತಿ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು, ಭುವನೇಶ್ವರಿ ಆಗ್ರೋ ಇಂಡಸ್ಟ್ರೀಸ್ನ ಮಾಲೀಕ ಅಕ್ಕಿ ರಾಜು, ನಿವೃತ್ತ ಎಇಇ ಶ್ರೀಮತಿ ಸುಭಾಷಿಣಿ ಕೆ.ಎಂ. ಮಂಜುನಾಥ್, ಶ್ರೀಮತಿ ಗೀತಾ ಶಿವಮೂರ್ತಯ್ಯ, ಶ್ರೀಮತಿ ಸುಧಾ ಹಾಗೂ ಕೀಲುಮೂಳೆ ತಜ್ಞ ಡಾ. ಟಿ.ಎಂ. ರವೀಂದ್ರ, ನಿವೃತ್ತ ಪ್ರಾಂಶುಪಾಲ ದೇವರಾಜ್ ಶೀಲವಂತ, ನಿವೃತ್ತ ಬಿಎಸ್ಸೆನ್ನೆಲ್ ಆಫೀಸರ್ ನಾಗರಾಜ್, ಕಾಂಗ್ರೆಸ್ ಮುಖಂಡ ಕೆ. ತಿಪ್ಪೇಶ್, ಗಣ್ಯ ವರ್ತಕ ಮಾಗಾನಹಳ್ಳಿ ಯುವರಾಜ್, ಡಿಯುಸಿ ಬ್ಯಾಂಕ್ ನಿರ್ದೇಶಕ ಸ್ವಾಗಿ ಮುರುಗೇಶ್, ಡಿಹೆಚ್ಯುಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಕೆ.ಎಂ. ನಟರಾಜ್, ಕಾಂಗ್ರೆಸ್ ಮುಖಂಡ ಹುಲಿಕಟ್ಟಿ ರಾಜೇಶ್, ಲಕ್ಷ್ಮಿ ಫ್ಲೋರ್ ಮಿಲ್ನ ರಾಜೇಶ್.
ದಿನಾಂಕ 1ರ ಗುರುವಾರ ಸಂಜೆ 6.30ಕ್ಕೆ ಏರ್ಪಾಡಾಗಿರುವ ಸಮಾರಂಭದಲ್ಲಿ ಹಂಪಸಾಗರದ ನವಲಿ ಹಿರೇಮಠದ ಶ್ರೀ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು. ನೇತೃತ್ವ : ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, (ಮುಕ್ತಿಮಂದಿರ ಕ್ಷೇತ್ರ ಹಾಗೂ ಅಧ್ಯಕ್ಷರು, ಅ.ಭಾ.ವೀ.ಶಿ.ಸಂಸ್ಥೆ (ರಿ.), ಬೆಂಗಳೂರು).
ಇದೇ ಸಂದರ್ಭದಲ್ಲಿ ಯುಪಿಎಸ್ಸಿಯಲ್ಲಿ 101ನೇ ರಾಂಕ್ ಪಡೆದ ವಿದ್ಯಾರ್ಥಿನಿ ಕು. ಸೌಭಾಗ್ಯ ಬೀಳಗಿಮಠ ಅವರಿಗೆ `ಸಾಧನೆಯ ಶಿಖರ’ ಬಿರುದಿನೊಂದಿಗೆ ಗೌರವ ಶ್ರೀರಕ್ಷೆ, ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಬಿಜೆಪಿ ಮುಖಂಡರಾದ ಶ್ರೀಮತಿ ಗಾಯತ್ರಿ ಸಿದ್ದೇಶ್ವರ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್, ಉಪ ಮಹಾಪೌರರಾದ ಶ್ರೀಮತಿ ಯಶೋಧ ಯಗ್ಗಪ್ಪ, ಬಿಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಹೆಚ್.ಸಿ. ಜಯಮ್ಮ, ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಗುರು ರಕ್ಷೆ : ಹರಿಹರ ಎಸ್ಜೆವಿಪಿ ಕಾಲೇಜಿನ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ನಗರ ಘಟಕದ ಅಧ್ಯಕ್ಷ ಶಂಭು ಉರೇಕೊಂಡಿ, ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಘಟಕದ ಸದಸ್ಯ ಬಿ.ಜಿ. ರಮೇಶ್, ಕಂಟ್ರ್ಯಾಕ್ಟರ್ ಎಂ. ಗುಡ್ಡಪ್ಪ, ಶ್ರೀಮತಿ ವಿನುತ ಪಿ.ಎಸ್. ಪರಶುರಾಮ್, ಆವರಗೊಳ್ಳದ ಶ್ರೀಮತಿ ಸುಧಾ ಡಿ.ಎಸ್. ಗಂಗಾಧರಸ್ವಾಮಿ, ಕಲ್ಯಾಣ ಬವಸೇಶ್ವರ ಟ್ರೇಡರ್ಸ್ನ ಶ್ರೀಮತಿ ಮಮತಾ ವಿಶ್ವನಾಥ್, ಅಕ್ಕಿ ವರ್ತಕರಾದ ಶ್ರೀಮತಿ ವಿಜಯಲಕ್ಷ್ಮಿ ಕೋರಿ ಸಿದ್ದೇಶ್, ಹರಿಹರ ಎಸ್ಜೆವಿಪಿ ಕಾಲೇಜಿನ ನಿರ್ದೇಶಕ ಎನ್.ಹೆಚ್. ಪಾಟೀಲ್, ವರ್ತಕ ಮಾಗಾನಹಳ್ಳಿ ಗಿರೀಶ್, ಆವರಗೊಳ್ಳದ ಶ್ರೀಮತಿ ಮಮತಾ ಯೋಗೀಶ್ ಮತ್ತು ಮಕ್ಕಳು, ಮಹಾನಗರ ಪಾಲಿಕೆ ನೀರು ಸರಬರಾಜು ವಿಭಾಗದ ಎಇಇ ಸಚಿನ್, ಒಳಚರಂಡಿ ವಿಭಾಗದ ಎಇಇ ವಿನಾಯಕ್, ಡಿಯುಸಿ ಬ್ಯಾಂಕ್ನ ಎಂ. ಬಸವರಾಜ್, ಯೋಗ ಶಿಕ್ಷಕ ಉಮೇಶ್ ಕೊಂಡಜ್ಜಿ, ಕಿರಾಣಿ ವರ್ತಕರಾದ ಶ್ರೀಮತಿ ಚೈತ್ರ ಕೆ.ಬಿ. ಮಹೇಂದ್ರ, ವೀರೇಶ್ವರ ಪುಣ್ಯಾಶ್ರಮದ ಚನ್ನವೀರಸ್ವಾಮಿ.
ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಲಿಂ. ಶ್ರೀಮದ್ರಂಭಾಪುರಿ ವೀರ ಗಂಗಾಧರ ಜಗದ್ಗುರುಗಳು ಆಷಾಢ ಮಾಸದಲ್ಲಿ ಶಿವಪೂಜೆ ಮಾಡುವು ದರೊಂದಿಗೆ ಶುಭ ಮಾಸವನ್ನಾಗಿ ಪರಿವರ್ತಿಸಿದರು. ಈ ನಿಟ್ಟಿನಲ್ಲಿ ಅವರ ಆ ದಾರಿ ಮತ್ತು ಗುರಿಯನ್ನಾಗಿಸಿಕೊಂಡು ರಂಭಾಪುರಿ ಪೀಠದ
ಶ್ರೀ ವೀರಸೋಮೇಶ್ವರ ಜಗದ್ಗುರುಗಳು ನಾಡಿನಾದ್ಯಂತ ಸಂಚರಿಸಿ, ಜನಜಾಗೃತಿ ಮತ್ತು ಧರ್ಮ ಪ್ರಜ್ಞೆಯನ್ನು ಬೆಳೆಸುತ್ತಿದ್ದಾರೆ. ಅದರಂತೆ ದಿನಾಂಕ 30.07.2024 ರಿಂದ 03.08.2024ರವರೆಗೆ ದಾವಣಗೆರೆಯಲ್ಲಿ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
– ದೇವರಮನೆ ಶಿವಕುಮಾರ್, ಅಧ್ಯಕ್ಷರು, ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆ, ನಿರ್ದೇಶಕರು, ದಾವಣಗೆರೆ ಅರ್ಬನ್ ಬ್ಯಾಂಕ್.
ಪಂಚಪೀಠಗಳಲ್ಲೊಂದಾದ ರಂಭಾಪುರಿ ಪೀಠದ
ಶ್ರೀ ವೀರಸೋಮೇಶ್ವರ ಜಗದ್ಗುರುಗಳವರಿಂದ ದಾವಣಗೆರೆಯಲ್ಲಿ ಈಗಾಗಲೇ 25 ವರ್ಷಗಳ ಕಾಲ ನಿರಂತರವಾಗಿ `ಇಷ್ಟಲಿಂಗ ಮಹಾಪೂಜೆ’ ಮತ್ತು `ಜನಜಾಗೃತಿ ಧರ್ಮಸಮಾವೇಶ’ವು ಯಶಸ್ವಿಯಾಗಿ ನಡೆದಿದ್ದು, ಈ ವರ್ಷ 26ನೇ ವರ್ಷದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಐದು ದಿನಗಳ ಈ ಸಮಾರಂಭಗಳಲ್ಲಿ ಸದ್ಭಕ್ತರು ಪಾಲ್ಗೊಂಡು, ಜಗದ್ಗುರುಗಳವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ವಿನಂತಿ..
– ದೇವರಮನೆ ಶಿವರಾಜ್, ಅಧ್ಯಕ್ಷರು, ಶ್ರೀ ಜಗದ್ಗುರು ರೇಣುಕಾ ಸಾಂಸ್ಕೃತಿಕ ಸಂಘ
ದಿನಾಂಕ 2ರ ಶುಕ್ರವಾರ ಸಂಜೆ 6.30ಕ್ಕೆ ಏರ್ಪಾಡಾಗಿರುವ ಸಮಾರಂಭದಲ್ಲಿ ತಾವರಕೆರೆ ಶಿಲಾಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು. ನೇತೃತ್ವ : ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು (ಹಿರೇಮಠ, ದೊಡ್ಡಗುಣಿ ಬಂಕಾಪುರ).
ಇದೇ ಸಂದರ್ಭದಲ್ಲಿ ಖ್ಯಾತ ಕೈಗಾರಿಕೋದ್ಯಮಿ ಶಿವಗಂಗಾ ಶ್ರೀನಿವಾಸ್ ಅವರಿಗೆ `ಶ್ರಮ ಸೇವಾ ಸಂಜೀವಿನಿ’ ಬಿರುದಿನೊಂದಿಗೆ ಗೌರವ ಶ್ರೀರಕ್ಷೆ, ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಭೂ ವಿಜ್ಞಾನ ಮತ್ತು ಗಣಿ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಶಾಸಕ ಶಿವಗಂಗಾ ಬಸವರಾಜ್, ಮಹಾಪೌರ ಬಿ.ಹೆಚ್. ವಿನಾಯಕ, ದಾವಣಗೆರೆ ವರದಿಗಾರರ ಒಕ್ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ, ಎಪಿಎಂಸಿ ಸಹಾಯಕ ನಿರ್ದೇಶಕ ಜೆ. ಪ್ರಭು, ಅಭಾವೀಮಹಾಸಭಾ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಗುರು ರಕ್ಷೆ : ಅವಾಂತರ ವಾರ ಪತ್ರಿಕೆ ಸಂಪಾದಕ ಹೆಚ್. ದುಗ್ಗಪ್ಪ, ಡಾ. ಎಸ್.ಎಸ್. ನೇತ್ರಾವತಿ, ಡಾ. ಎಸ್.ಎಸ್. ಪ್ರವೀಣ್, ಡಿಯುಸಿ ಬ್ಯಾಂಕ್ ನಿರ್ದೇಶಕ ಹೆಚ್.ಎಂ. ರುದ್ರಮುನಿಸ್ವಾಮಿ, ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಪಿ. ಪ್ರಸಾದ್, ವಿನಾಯಕ ಬಸ್ ಮಾಲೀಕ ಎಂ.ಎನ್. ಹರೀಶ್, ಜಾನಪದ ಕಲಾವಿದ ಮಹೇಶ್ವರಗೌಡ ಹನುಮಂತಗೌಡ ಲಿಂಗದಹಳ್ಳಿ, ಎಸ್. ಪರಮೇಶ್ವರಪ್ಪ ಬಣಕಾರ್, ವರ್ತಕ ಜಿ.ಹೆಚ್. ನಾಗರಾಜಪ್ಪ, ನಿವೃತ್ತ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ವಿರೂಪಾಕ್ಷಪ್ಪ ಅಣಜಿ, ಅಕ್ಕಿ ವರ್ಕತ ಕೆ.ವಿ. ಗುರುರಾಜ್, ಆವರಗೊಳ್ಳದ ಶ್ರೀಮತಿ ವೀರಮ್ಮ ವಿ.ಕೆ. ಸುರೇಶ್, ಶ್ರೀಮತಿ ಚಂದ್ರಲೇಖ ಕೋಟೆಮಠದ ಲಿಂಗೇಶ್, ಶ್ರೀಮತಿ ಪುಷ್ಪ ಚೆಲುವರಾಜ್, ಸಮಾಜ ಸೇವಕ ಮಲ್ಲಿಕಾರ್ಜನ್ ಇಂಗೇಳೇಶ್ವರ್.
ದಿನಾಂಕ 3ರ ಶನಿವಾರ ಸಂಜೆ 6.30ಕ್ಕೆ ಏರ್ಪಾಡಾಗಿರುವ ಸಮಾರಂಭದಲ್ಲಿ ಚನ್ನಗಿರಿ ಹಿರೇಮಠದ ಶ್ರೀ ಡಾ. ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು. ನೇತೃತ್ವ : ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು (ಹಿರೇಮಠ, ಬಿಳಕಿ).
ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಎಸ್.ಟಿ. ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ `ಸಮಾಜ ಸೇವ ವಿಭೂಷಣ’ ಬಿರುದಿನೊಂದಿಗೆ ಗೌರವ ಶ್ರೀರಕ್ಷೆ, ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ ನಾಯ್ಕ, ಮಾಜಿ ಮಹಾಪೌರ ಬಿ.ಜೆ. ಅಜಯ್ಕುಮಾರ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾಜಿ ಮಹಾಪೌರ ಎಸ್.ಟಿ. ವೀರೇಶ್, ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಷ್ಚಂದ್ರ, ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಪ್ರಸನ್ನಕುಮಾರ್, ಹರಿಹರ ಎಸ್ಜೆವಿಪಿ ಕಾಲೇಜಿನ ಕಾರ್ಯದರ್ಶಿ ಆರ್.ಟಿ. ಪ್ರಶಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಗುರು ರಕ್ಷೆ : ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಘಟಕದ ಸಂದೀಪ್ ಅಣಬೇರು, ಮಾಯಕೊಂಡ ಬಿಜೆಪಿ ಮುಖಂಡ ಜಿ.ಎಸ್. ಶಾಮ್, ಶ್ರೀಮತಿ ರೂಪಾ ಗಣೇಶ್, ಶ್ರೀಮತಿ ಮೇನಕ ಟಿ.ಹೆಚ್.ಎಂ. ವೀರೇಶ್, ಶ್ರೀಮತಿ ವಿದ್ಯಾ ಬಿ.ಜಿ. ಉಮೇಶ್, ಎಸ್ಜೆವಿಪಿ ಕಾಲೇಜಿನ ನಿರ್ದೇಶಕ ನಂದಿಗಾವಿ ತಿಪ್ಪೇಸ್ವಾಮಿ, ಕಾರ್ಮಿಕ ನಿರೀಕ್ಷಕ ರಾಜಶೇಖರ್ ಹಿರೇಮಠ, ಕಂಬಳಿ ನಿಜಗುಣ ಶಿವಯೋಗಿ, ಪ್ರಶಾಂತ್ ಕ್ಲಾತ್ ಸ್ಟೋರ್ನ ಜಿ.ಇ. ಪ್ರಶಾಂತ್, ಶ್ರೀಮತಿ ಶಿಲ್ಪ ಗಣೇಶ್ ವಿ. ಕಬ್ಬಿಣಕಂತಿನ ಮಠ, ಶ್ರೀಮತಿ ಆಶಾ ಎಸ್.ಎನ್. ಈಶ್ವರ್, ಬಾಪೂಜಿ ಆಸ್ಪತ್ರೆಯ ಡಿ. ಆಂಜನೇಯ, ಹರಿಹರ ಅರುಣ್ಕುಮಾರ್ ಹಿರೇಮಠ್.