ನ್ಯಾಮತಿ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಪಬ್ಲಿಕ್ ಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶಾಸಕ ಡಿ.ಜಿ. ಶಾಂತನಗೌಡ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲ್ಲೂಕು ಪತ್ರಕರ್ತರ ಸಂಘದ ಸಂಚಾಲಕ ಎಂ.ಎಸ್. ಶಾಸ್ತ್ರಿ ಹೊಳೆಮಠ ವಹಿಸಲಿದ್ದಾರೆ. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ್, ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಫಕೃದ್ದೀನ್, ನ್ಯಾಮತಿ ಕೆಪಿಎಸ್ ಪ್ರಾಂಶುಪಾಲ ವಿ.ಪಿ. ಪೂರ್ಣಾನಂದ, ಮುಖ್ಯ ಅತಿಥಿಗಳಾಗಿ ನ್ಯಾಮತಿ ತಾಲ್ಲೂಕು ತಹಶೀಲ್ದಾರ್ ಹೆಚ್.ಬಿ. ಗೋವಿಂದಪ್ಪ, ನ್ಯಾಮತಿ ಪೊಲೀಸ್ ಠಾಣೆಯ ಸಿಪಿಐ ಎನ್.ಎಸ್. ರವಿ, ನ್ಯಾಮತಿ ಪ.ಪಂ. ಮುಖ್ಯಾಧಿಕಾರಿ ಪಿ. ಗಣೇಶ್ ರಾವ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಅತಿಥಿಗಳಾಗಿ ಆಗಮಿಸುವರು.
ವರ್ತಕ ನುಚ್ಚಿನ ವಾಗೀಶ್, ಪೂಜಾರ್ ಚಂದ್ರಶೇಖರ್, ಜಿ. ಲೋಕೇಶ್ವರಪ್ಪ, ಎಂ.ಪಿ.ಎಂ. ಷಣ್ಮುಖಯ್ಯ ಉಪಸ್ಥಿತರಿದ್ದು, ರೈತ ಸಂಘದ ಅಧ್ಯಕ್ಷ ಹೆಚ್. ಉಮೇಶ್, ಗೌರವಾಧ್ಯಕ್ಷ ಹೆಚ್. ಮಲ್ಲಿಕಾರ್ಜುನಪ್ಪ ಕುಂಬಾರ, ಡಿ.ಎಂ. ವಿಜೇಂದ್ರ ಮಹೇಂದ್ರಕರ್ ಭಾಗವಹಿಸಲಿದ್ದಾರೆ.