ಮಲೇಬೆನ್ನೂರು : ಸಮಾಜದ ಟ್ರಸ್ಟ್ ಉದ್ಘಾಟನೆಯಲ್ಲಿ ನಾಗರಾಜ್ ಮೌಳೆ ಮನವಿ
ಮಲೇಬೆನ್ನೂರು, ಜ.8- ರಾಜ್ಯದಲ್ಲಿರುವ ನಾಮದೇವ ಸಿಂಪಿ ಸಮಾಜವನ್ನು ಸರ್ಕಾರ ಗುರು ತಿಸಿ, ಸರ್ಕಾರದ ಸೌಲಭ್ಯಗಳನ್ನು ನೀಡಬೇಕೆಂದು ನಾಮದೇವ ಸಿಂಪಿ ಸಮಾಜದ ಹೊನ್ನಾಳಿ ತಾ. ಅಧ್ಯಕ್ಷ ಎಸ್.ಎಂ.ನಾಗರಾಜ್ ಮೌಳೆ ಒತ್ತಾಯಿಸಿದರು.
ಅವರು, ಭಾನುವಾರ ಪಟ್ಟಣದ ಕಾಳಿಕಾಂಬ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಲೇಬೆನ್ನೂರು ನಾಮದೇವ ಸಿಂಪಿ ಸಮಾಜ ಟ್ರಸ್ಟ್ ಅನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅತ್ಯಂತ ಸಣ್ಣ ಸಮುದಾಯವಾಗಿರುವ ನಮ್ಮ ಸಮಾಜ ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸರ್ಕಾರ ನಮ್ಮನ್ನು ಮೇಲೆತ್ತುವ ಕೆಲಸ ಮಾಡಬೇಕೆಂದು ನಾಗರಾಜ್ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಲೇಬೆನ್ನೂರು ನಾಮದೇವ ಸಿಂಪಿ ಸಮಾಜದ ನೂತನ ಅಧ್ಯಕ್ಷ ಕುಡಪಲಿ ಮಂಜುನಾಥ್ ಮಾತನಾಡಿ, ಮಲೇಬೆನ್ನೂರಿನಲ್ಲಿ ನಾಮದೇವ ಸಿಂಪಿ ಸಮಾಜದ ದೇವಸ್ಥಾನ ಹಾಗೂ ಸಮುದಾಯ ಭವನ ನಿರ್ಮಿಸಲು ಪುರಸಭೆಯಿಂದ ಉಚಿತ ನಿವೇಶನ ನೀಡಬೇಕೆಂದು ಕೋರಿದರು.
ಸಮಾಜದ ಹೊನ್ನಾಳಿ ತಾ.ಕಾರ್ಯದರ್ಶಿ ಜಗನ್ನಾಥ್, ಮಲೇಬೆನ್ನೂರು ಸಮಾಜದ ಉಪಾಧ್ಯಕ್ಷ ಧರ್ಮಣ್ಣ, ಟಿ.ಹಾಲೇಶಪ್ಪ, ನಿಟ್ಟೂರು ನಿಂಗಪ್ಪ, ನಿರ್ದೇಶಕ ರಾದ ಆನಂದಪ್ಪ, ಗಣೇಶಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಶ್ರೀಮತಿ ಸೌಜನ್ಯ ಶ್ರೀನಿವಾಸ್ ಪ್ರಾರ್ಥಿಸಿದರು. ಸಮಾಜದ ಕಾರ್ಯದರ್ಶಿ ಶ್ರೀನಿವಾಸ್ ಸ್ವಾಗತಿಸಿದರು. ಶಿಕ್ಷಕ ಕರಿಬಸಪ್ಪ ನಿರೂಪಿಸಿ, ವಂದಿಸಿದರು.