ಗುತ್ತೂರು ಸ್ಮಶಾನ ಜಲಾವೃತ: ಅಂತ್ಯಕ್ರಿಯೆಗೆ ಪರದಾಟ

ಗುತ್ತೂರು ಸ್ಮಶಾನ ಜಲಾವೃತ: ಅಂತ್ಯಕ್ರಿಯೆಗೆ ಪರದಾಟ

ಹರಿಹರ, ಜು.26- ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ಪಾತ್ರದಲ್ಲಿರುವ ತಾಲ್ಲೂಕಿನ ಗುತ್ತೂರು ಗ್ರಾಮದ ಸ್ಮಶಾನ ಜಲಾವೃತವಾದ ಹಿನ್ನೆಲೆಯಲ್ಲಿ ಗುರುವಾರ ಮೃತಪಟ್ಟ ವ್ಯಕ್ತಿಯೊಬ್ಬರು ಅಂತ್ಯಕ್ರಿಯೆಗೆ ಗ್ರಾಮಸ್ಥರು ಪರದಾಡಿದ ಘಟನೆ ನಡೆಯಿತು.

ಗ್ರಾಮದ ನಿವಾಸಿ ಎಚ್‌.ಎಂ.ಸಿ. ಮಂಜಪ್ಪ  (70) ಗುರುವಾರ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಮಾಡಬೇಕಾದ ಸ್ಮಶಾನ ಜಲಾವೃತವಾಗಿತ್ತು. ನದಿಯಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು ಪಕ್ಕದಲ್ಲಿರುವ ಸಣ್ಣ ಗುಡ್ಡದ ಮೇಲೆ ಅಂತ್ಯಕ್ರಿಯೆ ನೆರವೇರಿಸಿದರು.

ನದಿ ತುಂಬಿ ಹರಿಯುತ್ತಿದ್ದು, ಸ್ಮಶಾನ ಜಾಗೆ ಯೂ ನೀರಿನಿಂದ ಆವೃತವಾಗಿದ್ದರಿಂದ ಈಜು ಬಲ್ಲ ಕೆಲ ಯುವಕರು ಶವವನ್ನು  ಹೊತ್ತುಕೊಂಡು ನದಿ ನೀರಿನಲ್ಲೇ ಸಾಗಿ ನೆರವಾದರು. ಮಹಿಳೆಯರು ಹಾಗೂ ಈಜು ಬಾರದವರು ನದಿಯ ಈ ಭಾಗದಲ್ಲಿ ನಿಂತು ಶವ ಸಂಸ್ಕಾರದ ಪ್ರಕ್ರಿಯೆ ವೀಕ್ಷಿಸಿದರು. 

ಗುತ್ತೂರು ಹಾಗೂ ಸುತ್ತಲಿನ ಪ್ರದೇಶದ ನದಿ ತೀರದಲ್ಲಿ ಅಕ್ರಮವಾಗಿ ಮಣ್ಣು, ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆದಿರುವುದೇ ನದಿ ದಡದಲ್ಲಿರುವ ಸ್ಮಶಾನ ಜಲಾವೃತವಾಗಲು ಕಾರಣ. ಈಗೀಗ ನದಿ ನೀರು ಸ್ಮಶಾನಕ್ಕೇ ನುಗ್ಗು ತ್ತದೆ. 

ಅಂತ್ಯಸಂಸ್ಕಾರಕ್ಕೆ ಬೇರೆ ಸ್ಥಳ ನಿಗದಿ ಮಾಡ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

error: Content is protected !!