ಟ್ರೇಡಿಂಗ್ ಲಾಭ ತೋರಿಸಿ 1.35 ಕೋಟಿ ರೂ. ವಂಚನೆ

ದಾವಣಗೆರೆ, ಜು.26- ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ ಮಾಡಬಹುದೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೂಲಕ 1.35 ಕೋಟಿ ರೂ. ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.

ಎಸ್.ಎಸ್. ಬಡಾವಣೆ ಬಿ ಬ್ಲಾಕ್ ವಾಸಿ ನವೀನ್ ವಂಚನೆಗೊಳಗಾದ ವ್ಯಕ್ತಿ. ಇವರಿಗೆ ದಿವ್ಯ ನಾಯರ್ ಎಂಬ ವ್ಯಕ್ತಿ ಪರಿಚಯಿಸಿಕೊಂಡು ಕೆಲ ದಿನಗಳ ನಂತರ ಫೋರೆಕ್ಸ್ ಅಂಡ್ ಸಿಎಫ್‌ಡಿ ಮೂಲಕ ಟ್ರೇಡಿಂಗ್ ಮಾಡಿ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿ ಆನ್‌ಲೈನ್ ಮೂಲಕ 1,35,50,000 ರೂ. ಪಡೆದು ವಂಚಿಸಿದ್ದಾರೆ. 

ಈ ಬಗ್ಗೆ ನವೀನ್ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.

error: Content is protected !!