ಮಲೇಬೆನ್ನೂರಿನಲ್ಲಿ ಹಸು ಕಳ್ಳನ ಬಂಧನ

ಮಲೇಬೆನ್ನೂರು, ಜು. 25- ಹಸು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ. ಕಡರನಾಯ್ಕನಹಳ್ಳಿಯ ವಾಸಿ ಅಲಿಸಾಬ್ ಬಂಧಿತ ಆರೋಪಿಯಾಗಿದ್ದು, ಈತನಿಂದ ಕಳ್ಳತನವಾಗಿದ್ದ ಹಸು ಮಾರಾಟದಿಂದ ಬಂದ 15 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ 2.10 ಲಕ್ಷ ರೂ. ಮೌಲ್ಯದ ಟಾಟಾ ಏಸ್ ಲಗೇಜ್ ವಾಹನ ಜಪ್ತಿ ಮಾಡಲಾಗಿದೆ.

ಕಡರನಾಯ್ಕನಹಳ್ಳಿಯಲ್ಲಿ 05-04-2023ರ ರಾತ್ರಿ ಗುಡಿಸಲಿನಲ್ಲಿದ್ದ 80 ಸಾವಿರ ರೂ. ಮೌಲ್ಯದ 2 ಹಸು ಕಳ್ಳತನವಾದ ಕುರಿತು ಪ್ರಕರಣ ದಾಖಲಾಗಿತ್ತು. ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ, ಮಲೇಬೆನ್ನೂರು ಠಾಣೆಯ ಪಿಎಸ್ಐ (ಕಾ.ಸು) ಪ್ರಭು ಡಿ. ಕೆಳಗಿನಮನಿ, ಸಿಬ್ಬಂದಿಗಳಾದ ಫೈರೋಜ್ ಖಾನ್, ವೆಂಕಟರಮಣ, ಲಕ್ಷ್ಮಣ, ರಾಜಶೇಖರ್, ವೀರೇಶ್‌, ಜೀಪ್ ಚಾಲಕ ರಾಜಪ್ಪ ಸೇರಿದಂತೆ, ತಂಡವು ಪ್ರಕರಣ ಭೇದಿಸಿದ್ದಾರೆ.

error: Content is protected !!