ಹರಿಹರ ಇಂಡಿಯನ್ ಸೌಹಾರ್ದ ಕೋ-ಆಪ್ ಸೊಸೈಟಿ ಅಧ್ಯಕ್ಷರಾಗಿ ಸಿ.ಎನ್. ಹುಲಗೇಶ್

ಹರಿಹರ ಇಂಡಿಯನ್ ಸೌಹಾರ್ದ ಕೋ-ಆಪ್ ಸೊಸೈಟಿ ಅಧ್ಯಕ್ಷರಾಗಿ ಸಿ.ಎನ್. ಹುಲಗೇಶ್

ಉಪಾಧ್ಯಕ್ಷರಾಗಿ ಕೆ.ಹೆಚ್. ಮಲ್ಲೇಶಪ್ಪ

ಹರಿಹರ, ಜು.25-  ಸೊಸೈಟಿಯ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ನನಗೆ ಮತ್ತೊಂದು ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದರಿಂದ  ಸೊಸೈಟಿ ಇನ್ನಷ್ಟು ಪ್ರಗತಿ ಸಾಧಿಸಲು  ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ದಿ ಇಂಡಿಯನ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಿ.ಎನ್. ಹುಲಗೇಶ್ ಹೇಳಿದರು.

ನಗರದ ಪಕ್ಕೀರಸ್ವಾಮಿ ಮಠದ ಹತ್ತಿರದಲ್ಲಿರುವ  ಸೊಸೈಟಿಗೆ ನೂತನವಾಗಿ  ಆಯ್ಕೆಯಾದ  ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. 

ಸೊಸೈಟಿ ಉನ್ನತ ಮಟ್ಟದಲ್ಲಿ ಪ್ರಗತಿ ಸಾಧಿ ಸಲು, ಪ್ರಾರಂಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ತದನಂತರ ಕೊರೊನಾ ಬಂದು ಸ್ವಲ್ಪ ಮಟ್ಟಿಗೆ ಪ್ರಗತಿಗೆ ಅಡ್ಡ ಆದರೂ ಸಹ, ನಂತರದ ವರ್ಷಗಳಲ್ಲಿ ಸೊಸೈಟಿ ಸರ್ವ ಸದಸ್ಯರ ನಿರೀಕ್ಷೆಗೆ ಮೀರಿ ಲಾಭ ಗಳಿಸಿದೆ ಎಂದರು.

ಸೊಸೈಟಿ ಅಧ್ಯಕ್ಷರಾಗಿ ಸಿ.ಎನ್. ಹುಲಗೇಶ್ ಮತ್ತು ಉಪಾಧ್ಯಕ್ಷರಾಗಿ ಕೆ.ಹೆಚ್. ಮಲ್ಲೇಶಪ್ಪ ಮತ್ತು ನಿರ್ದೇಶಕರಾಗಿ ಜೋಸೆಫ್, ದಿವಾಕರ್, ಸೈಯದ್ ಆಸೀಫ್ ಆಹ್ಮದ್ ಜುನೇದಿ, ಭಕ್ತ ಸಿಂಗ್, ಜಗದೀಶ್ ಚೂರಿ, ಹೆಚ್ ಮಾರುತಿ ಶೆಟ್ಟಿ, ಎಂ.ಬಿ. ಪ್ರಭುದೇವ, ಸುಜಾತ ಕೆ.ಜೆ ಡ್ಯಾನಿಯಲ್, ವನಜಾಕ್ಷಿ ರಾಜೇಂದ್ರಕುಮಾರ್, ರಿಯಾಜ್ ಆಹ್ಮದ್, ಉಮಾಶಂಕರ್ ಎಲ್, ಹೆಚ್.ಎಂ. ಸುಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು  ಚುನಾವಣಾಧಿಕಾರಿ  ಗುಡ್ಡಪ್ಪ ಅವರು   ಘೋಷಣೆ ಮಾಡಿದರು. ಲೆಕ್ಕ ಪರಿಶೋಧಕ ಅಧಿಕಾರಿ ಮಂಜುನಾಥ್ ಸ್ವಾಮಿ ಅನುಮೋದಿಸಿದರು.

ಚಿತ್ರದುರ್ಗದ ಎಸ್.ಡಿ.ಓ ಅಧಿಕಾರಿ ಉಮೇಶ್ ಮಾತನಾಡಿ ದರು. ಈ ಸಂದರ್ಭದಲ್ಲಿ ಸೊಸೈಟಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಆರ್.ಎಸ್. ರವೀಂದ್ರನಾಥ್,  ಎಸ್.ಡಿ.ಎ ಸಂತೋಷ ಕುಮಾರ್, ಪಿಗ್ಮಿ ಸಂಗ್ರಾಹಕರಾದ ಎಸ್.ಎನ್. ಚಂದ್ರಶೇಖರ್, ಎ ಮಂಜುನಾಥ್, ಟಿ.ಎಸ್. ಹನುಮಂತಪ್ಪ, ಎಸ್.ಎನ್. ಸಂದೀಪ್, ಇಮಾನುವೇಲ್ ಮಧುಕರ್, ಆರ್  ಮಲ್ಲೇಶ್, ಪಿ.ಜೆ. ಅನಿಲ್  ಎಸ್. ರವಿಕುಮಾರ್, ಪಿ. ಸತೀಶ್ ಕುಮಾರ್, ಇರ್ಷಾದ್ ಆಲಿ, ಎಸ್ ಅರುಣ್ ಕುಮಾರ್ ಇತರರು ಹಾಜರಿದ್ದರು.

error: Content is protected !!