ಹೊನ್ನಾಳಿ,ಜು.25- ಪುರಸಭೆ ವ್ಯಾಪ್ತಿಯ ಖಾಲಿ ನಿವೇಶನದಲ್ಲಿ ಅನಗತ್ಯವಾಗಿ ಬೆಳದಿರುವ ಗಿಡ-ಗಂಟಿಗಳು ಮತ್ತು ಜಾಲಿಗಿಡಗಳನ್ನು ತೆರವುಗೊಳಿಸುವಂತೆ ನಿವೇಶನಗಳ ಮಾಲೀಕರಿಗೆ ಪುರಸಭೆ ಮುಖ್ಯಾಧಿಕಾರಿಗಳು ಸೂಚಿಸಿದ್ದಾರೆ.
ಹೀಗೆ ಖಾಲಿ ಪ್ರದೇಶದಲ್ಲಿ ಬೆಳದಿರುವ ಗಿಡ-ಗಂಟಿಗಳಲ್ಲಿ ಸಾರ್ವಜನಿಕರು ತ್ಯಾಜ್ಯವನ್ನು ಹಾಕುತ್ತಿದ್ದು, ಮಳೆಗಾಲವಾಗಿರುವುದರಿಂದ ನೀರು ನಿಂತು ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾದಂತಹ ಮಾರಕ ರೋಗಗಳು ಹರಡಲು ಕಾರಣವಾಗುತ್ತದೆ. 7 ದಿನಗಳ ಒಳಗಾಗಿ ನಿವೇಶನ ಮಾಲೀಕರು ಸ್ವಚ್ಛತೆ ಮಾಡಿಸದೇ ಇದ್ದಲ್ಲಿ ಕಛೇರಿಯ ಜೆ.ಸಿ.ಬಿ. ಮೂಲಕ ಸ್ವಚ್ಛಗೊಳಿಸಿ, ಸದರಿ ವೆಚ್ಚವನ್ನು ನಿವೇಶನ ಮಾಲೀಕರಿಂದ ವಸೂಲಾತಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ನಳಗಳಿಗೆ ಟ್ಯಾಪ್‌ನ್ನು ಅಳವಡಿಸಿಕೊಂಡು ನೀರು ಪೋಲಾಗದಂತೆ ನೋಡಿಕೊಳ್ಳಬೇಕು ತಪ್ಪಿದಲ್ಲಿ ಪುರಸಭೆ ಕಾಯ್ದೆಯನ್ವಯ ಕ್ರಮವಹಿಸ ಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.