ಪ್ಯಾನಿಕ್ ಬಟನ್, ಜಿಪಿಎಸ್ ವ್ಯವಸ್ಥೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಪ್ಯಾನಿಕ್ ಬಟನ್, ಜಿಪಿಎಸ್ ವ್ಯವಸ್ಥೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ರಾಣೇಬೆನ್ನೂರು, ಜು. 25 – ರಾಜ್ಯದಲ್ಲಿ ಟ್ಯಾಕ್ಸಿಗಳಿಗೆ ಅಳವಡಿಸಲು ಸೂಚಿಸಿರುವ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ವ್ಯವಸ್ಥೆ ಕೈಬಿಡುವಂತೆ ಆಗ್ರಹಿಸಿ ನಗರದ ಹಳೇ ಪಿ.ಬಿ.ರಸ್ತೆ ಶ್ರೀ ವಿನಾಯಕ ಕಾರು ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಗುರುವಾರ ನಗರದಲ್ಲಿ ಪ್ರತಿಭಟಿಸಿ, ಎ.ಆರ್.ಟಿ.ಓ ಕಛೇರಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡು ಬಸ್‍ಸ್ಟ್ಯಾಂಡ್ ಸರ್ಕಲ್, ಹಲಗೇರಿ ಕ್ರಾಸ್, ಕುರುಬಗೇರಿ ಕ್ರಾಸ್ ಮಾರ್ಗವಾಗಿ ಎಆರ್‍ಟಿಒ ಕಚೇರಿಗೆ ತೆರಳಿದರು. ದಾರಿಯುದ್ದಕ್ಕೂ ಪ್ರತಿಭಟನಾಕಾರರು ಸರ್ಕಾರದ ಕ್ರಮ ಖಂಡಿಸಿ ಘೋಷಣೆಗಳನ್ನು ಕೂಗಿದರು. 

ಚಾಲಕರು ಮತ್ತು ಮಾಲಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದು, ರಾಜ್ಯ ಸರ್ಕಾರ ಸೂಚಿಸಿರುವಂತೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ವ್ಯವಸ್ಥೆ ಅಳವಡಿಸುವ ಮೊತ್ತವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಈ ವ್ಯವಸ್ಥೆಯು ಯಾವುದೇ ರೀತಿಯಲ್ಲಿ ಅನುಕೂಲಕರವಾಗಿರುವುದಿಲ್ಲ. ಆದ್ದರಿಂದ ಸರ್ಕಾರ ತತ್‍ಕ್ಷಣದಿಂದ ಈ ವ್ಯವಸ್ಥೆಯನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

ಸಂಘನೆಯ ಅಧ್ಯಕ್ಷ ರವಿಕುಮಾರ ಕಬ್ಬಾರ, ಉಪಾಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ದಿಲೀಪ ದೊಡ್ಮನಿ, ಬಾಬು ಹೊಳಿಯಮ್ಮನವರ, ಸುರೇಶ ಹೊಸರಿತ್ತಿ, ಹರೀಶ ಕಂಬಳಿ, ಬಸಣ್ಣ ಜಲ್ಲೇರ, ಶಿವಾನಂದ ಹಂಚಿನಾಳ, ನಿಂಗರಾಜ ಮುನಿಯನಕೊಪ್ಪ, ಬೀರಪ್ಪ ಕುರಬರ, ನೀಲಪ್ಪ ಹೂಲಿಹಳ್ಳಿ ಮತ್ತು ಸರ್ವ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

error: Content is protected !!