ಗುರುಪೂರ್ಣಿಮೆ ನಿರಂತರವಾಗಿರಲಿ

ಗುರುಪೂರ್ಣಿಮೆ ನಿರಂತರವಾಗಿರಲಿ

ಸೋಮೇಶ್ವರ ವಿದ್ಯಾಲಯದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕಿ ಬಿ.ಆರ್. ಸುಜಾತ ಆಶಯ

ದಾವಣಗೆರೆ, ಜು. 25- ಗುರುಪೂರ್ಣಿಮೆ ಎಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ. ಪ್ರತಿ ನಿತ್ಯವೂ ಗುರುಪೂರ್ಣಿಮೆ ಆಗಿರಬೇಕು ಎಂದು ತಾಲ್ಲೂಕಿನ ಅಣಜಿ ಇಂದಿರಾಗಾಂಧಿ ವಸತಿ ಶಾಲೆಯ ವಿಜ್ಞಾನ ಶಿಕ್ಷಕಿ ಬಿ.ಆರ್. ಸುಜಾತ ಹೇಳಿದರು.

ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಈಚೆಗೆ ನಡೆದ ಗುರುಪೂರ್ಣಿಮೆ ಕಾರ್ಯಕ್ರಮ ದಲ್ಲಿ ಶ್ರೀ ಗುರು ವ್ಯಾಸರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಶಿಕ್ಷಕರಾಗಲಿ, ತಂದೆ-ತಾಯಿಗಳಾಗಲಿ, ಹಿರಿಯ ರಾಗಲಿ ಅವರು ನಮಗೆ ಸಲಹೆ, ಮಾರ್ಗದರ್ಶನ ನೀಡಿ ಜೀವನ ಹಾಗೂ ನಮ್ಮ ಬದುಕನ್ನು ಸಾರ್ಥಕತೆಯತ್ತ ಕೊಂಡ್ಯೊಯ್ಯುವ ಅವರು ನಮಗೆ ಗುರುಗಳು ಇದ್ದಂತೆ. ಸದಾ ನಾವು ಅವರನ್ನು ಸ್ಮರಿಸುವ ಜೊತೆಗೆ ಗುರುಗಳ ನಡೆ-ನುಡಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಪ್ರಾಥಮಿಕ ಮಕ್ಕಳಿಗೆ ಗುರುಪೂರ್ಣಿಮೆ ಹಿನ್ನೆಲೆ ವೇಷಭೂಷಣ ಸ್ಪರ್ಧೆ ಆಯೋಜಿಸಿದ್ದು, ಪುಟಾಣಿ ಮಕ್ಕಳು ಬಸವಣ್ಣ, ಅಕ್ಕಮಹಾದೇವಿ, ಋಷಿಮುನಿಗಳು, ರಾಘವೇಂದ್ರ ಸ್ವಾಮಿಗಳು, ವಿವೇಕಾನಂದ ಸೇರಿದಂತೆ ಮಹನೀಯರ ವೇಷಭೂಷಣಗಳೊಂದಿಗೆ ಆಗಮಿಸಿ ಗುರು ಶಿಷ್ಯರ ತತ್ವ ಸಿದ್ಧಾಂತ ಸಾರುವ ಮೂಲಕ ಎಲ್ಲರ ಗಮನಸೆಳೆದರು.

ಶಾಲೆಯ ಶೈಕ್ಷಣಿಕ ನಿರ್ದೇಶಕ ಪಿ.ಪರಮೇಶ್ವರಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಎನ್. ಪ್ರಭಾವತಿ, ಮುಖ್ಯ ಶಿಕ್ಷಕಿ ಗಾಯತ್ರಿ, ತೀರ್ಪುಗಾರರಾಗಿ ಹೀನಾಬಾಯಿ, ಕವಿತಾ, ರಂಜಿತಾ ಮತ್ತು ಪೋಷಕರು, ವಿದ್ಯಾರ್ಥಿಗಳು ಇದ್ದರು.

error: Content is protected !!