ಕಸ ಹಾಕದಂತೆ ಮೂತ್ರ ವಿಸರ್ಜನೆ ಮಾಡದಂತೆ ಜಾಗೃತಿ ಪೋಸ್ಟರ್

ಕಸ ಹಾಕದಂತೆ ಮೂತ್ರ ವಿಸರ್ಜನೆ ಮಾಡದಂತೆ ಜಾಗೃತಿ ಪೋಸ್ಟರ್

ದಾವಣಗೆರೆ, ಜು. 23 – ನಗರದ ವಿವಿಧ ಕಡೆ ಇರುವ ಬೆಸ್ಕಾಂ ಯುಜಿ ಕೇಬಲ್‌ ಬಾಕ್ಸ್‌ ಗಳ ಬಳಿ ಕೆಲವು ಸಾರ್ವಜನಿಕರು ಹಾಗೂ ಕೆಲವು ಅಂಗಡಿಯವರು ಕಸ ಹಾಕುತ್ತಿದ್ದು, ಇದರ ಅಕ್ಕ ಪಕ್ಕದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್‌ ನೇತೃತ್ವದಲ್ಲಿ ಬಾಕ್ಸ್‌ ಗಳಿಗೆ ಪೋಸ್ಟರ್‌ ಅಂಟಿಸಿ ಜಾಗೃತಿ ಮೂಡಿಸಲಾಯಿತು.

ಸಾರ್ವಜನಿಕರು ಇದರ ಬಳಿ ಕಸ ಹಾಕುವುದರಿಂದ ಕಸ ವಿಲೇವಾರಿ ಮಾಡಲು ಪೌರ ಕಾರ್ಮಿಕರಿಗೆ ಹಾಗೂ ವಿದ್ಯುತ್‌ ತುರ್ತು ದುರಸ್ತಿ ಮಾಡುವಾಗ ಈ ಬಾಕ್ಸ್‌ಗಳಿಂದ ಗಬ್ಬು ವಾಸನೆ ಬರುತಿದ್ದು, ಆರೋಗ್ಯದ ತೊಂದರೆ ಬರಬಹುದು ಹಾಗೂ ಸೊಳ್ಳೆ ಹಾಗೂ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. 

ಅಲ್ಲದೇ ಕೆಲವರು ಗಾಡಿಗೆ ಕಸ ಕೊಡದೆ ರಾತ್ರಿ ಹೊತ್ತು ವಾಕಿಂಗ್‌ ನೆಪದಲ್ಲಿ ಕಸ ಹಾಕುತ್ತಿದ್ದಾರೆ. ಜನರು ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಬೆಸ್ಕಾಂ ನ ಪವನ್‌ ಮನವಿ ಮಾಡಿದರು. 

ಪಾಲಿಕೆ ಆರೋಗ್ಯ ನಿರೀಕ್ಷಕ ಮದನ್‌ ಕುಮಾರ್‌, ಎಂ.ಜಿ. ಶ್ರೀಕಾಂತ್‌, ಶೋಭಿತ್‌ ಕಂಪ್ಯೂಟರ್‌ನ ಮಾಲೀಕರಾದ ಸಂತೋಷ್‌, ಕಿರಣಕುಮಾರ್‌ ಎಂ. ಆರ್‌, ಪಾಲಿಕೆ ಸಿಬ್ಬಂದಿ ತ್ರಿಮೂರ್ತಿ ಮತ್ತಿತರರಿದ್ದರು.

error: Content is protected !!