ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ, ಗುರು ಬಸಮ್ಮ ವಿ.ಚಿಗಟೇರಿ ಪ್ರೌಢಶಾಲೆ (ಆಂಗ್ಲ ಮಾಧ್ಯಮ) ಗುರುಬಸಮ್ಮ ವಿ. ಚಿಗಟೇರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಹಾಗೂ ಶಿವಣ್ಣ ಚಿಗಟೇರಿ ಶಿಶುವಿಹಾರದ ವತಿಯಿಂದ ನರಸರಾಜ ರಸ್ತೆಯ ಗುರುಬಸಮ್ಮ ವಿ. ಚಿಗಟೇರಿ ಶಾಲಾ ಆವರಣದಲ್ಲಿ `ವಿಭವ ವಿಕಾಸ 2024-25′ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮವನ್ನು ಇಂದು ಮಧ್ಯಾಹ್ನ 3ಕ್ಕೆ ಹಮ್ಮಿಕೊಳ್ಳ ಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಎಂ.ಎಸ್. ವೀರಮ್ಮ ವಹಿಸುವರು. ಸಿ. ಅಜಯ್‌ನಾರಾಯಣ್ ಉದ್ಘಾಟಿಸುವರು. ವಿದ್ಯಾರ್ಥಿಗಳಿಗೆ ಬಸವರಾಜಪ್ಪ ಬೆಳಗಾವಿ ಪ್ರತಿಭಾ ಪುರಸ್ಕಸ್ಕಾರ ನೀಡುವರು. ಮುಖ್ಯ ಅತಿಥಿಗಳಾಗಿ ಮನೋಹರ್ ಎಸ್.ಚಿಗಟೇರಿ, ಶ್ರೀಮತಿ ಸೌಮ್ಯ ಬಸವರಾಜ್, ಎಂ.ಟಿ. ಮಳಗಿ, ಹೆಚ್.ನಿಂಗಪ್ಪ ಹಾಗೂ ಉಪಸ್ಥಿತರಿರುವರು.
January 8, 2025