ದಾವಣಗೆರೆ, ಜು.23- ಮಗುವಿಗೆ ತಂದೆ-ತಾಯಿಯರು ರಕ್ತ ಸಂಬಂಧಿಗಳಾದರೆ, ಗುರು ಶಿಷ್ಯನಿಗೆ ಭಾವ ಸಂಬಂಧಿ ಎಂದು ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದಜೀ ತಿಳಿಸಿದರು.
ನಗರದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಹ್ಮ ವಿಷ್ಣು ಮಹೇಶ್ವರರ ಪ್ರತೀಕವೇ ಗುರುವಾಗಿದ್ದು, ಸಮಾಜದಲ್ಲಿನ ಕಳೆ ಕಿತ್ತೊಗೆ ಯುವಲ್ಲಿ ವಿದ್ಯಾರ್ಥಿಗಳಿಗೆ ಗುರು ದಾರಿ ದೀಪ ವಾಗುತ್ತಾನೆ ಎಂದು ಹೇಳಿದರು. ನಮ್ಮ ದೇಶವು ವಿಶ್ವಗುರು ಆಗುವುದರಲ್ಲಿ ಗುರು ಪೂರ್ಣಿಮೆ ನೆರವಾಗಲಿದೆ ಎಂದು ಆಶಿಸಿದರು.
ಡಿವೈ ಎಸ್ಪಿ ಪ್ರಕಾಶ್ ಪಿ.ಬಿ ಮಾತನಾಡಿ, ಗುರುಗಳ ಆಶ್ರಯದಲ್ಲಿ ಬೆಳೆದರೆ ಕತ್ತಲೆಯಿಂದ ಬೆಳಕಿನಡೆಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳು ಸನ್ಮಾರ್ಗದಲ್ಲಿ ನಡೆದು ಆದರ್ಶ ವ್ಯಕ್ತಿಗಳಾಗಬೇಕು ಎಂದು ಸಲಹೆ ನೀಡಿದರು.
ಶಾಲಾ ಪ್ರಾಚಾರ್ಯ ಎಚ್.ವಿ. ಯತೀಶ್, ರಾಗಿಣಿ, ಶಿಲ್ಪಾ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು. ಐಶ್ವರ್ಯ ನಿರೂಪಿಸಿದರು.