ಜಿಲ್ಲಾಡಳಿತದ ನಿರ್ಲಕ್ಷ್ಯ: ಕೃಷಿ ಸಾಮಗ್ರಿ ನೀರು ಪಾಲು

ಜಿಲ್ಲಾಡಳಿತದ ನಿರ್ಲಕ್ಷ್ಯ:  ಕೃಷಿ ಸಾಮಗ್ರಿ ನೀರು ಪಾಲು

ರಾಣೇಬೆನ್ನೂರು, ಜು.24 – ತುಂಗಭದ್ರಾ ನದಿಯಲ್ಲಿ ನೀರು ಹೆಚ್ಚಳವಾಗುವ ಬಗ್ಗೆ ಹಾವೇರಿ ಜಿಲ್ಲಾಡಳಿತ ರೈತರಿಗೆ ಹಾಗೂ ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ಕೊಡದಿದ್ದರಿಂದ ರೈತರ ಕೃಷಿ ಉಪಕರಣಗಳು ನದಿಯ ಪಾಲಾಗಿವೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಜಿನುಗು ಮಳೆ ಬಿಟ್ಟರೆ ದೊಡ್ಡ ಮಳೆ ಧರೆಗುರುಳಿಲ್ಲ. ಆದ್ದರಿಂದ ರೈತರೆಲ್ಲರು ಕೃಷಿ ಚಟವಟಿಕೆಯಲ್ಲಿ ಮೈಮರೆತಿದ್ದರು. ಈಗ ಏಕಾಏಕಿ ತುಂಗಭದ್ರೆಗೆ ನೀರಿನ ಹರಿವು ಪ್ರಮಾಣ ಹೆಚ್ಚಾದ ಹಿನ್ನೆಲೆ ಕೃಷಿ ಪಂಪ್‌ಸೆಟ್‌, ಪೈಪ್‌, ವೈಯರ್‌ ಹಾಗೂ ಇತರೆ ಕೃಷಿ ಸಾಮಗ್ರಿಗಳು ನೀರಿನಲ್ಲಿ ತೇಲಿ ಹೋಗಿವೆ ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಅನಾವೃಷ್ಟಿ, ಬೆಳೆ ನಷ್ಟ, ಬರ ಪರಿಹಾರ, ಬೆಳೆ ವಿಮೆ ಹಾಗೂ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ರೈತಾಪಿ ವರ್ಗ ವಿಲಿವಿಲಿ ಒದ್ದಾಡುತ್ತಿದ್ದು, ಈಗ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು  ಜಿಲ್ಲಾಡಳಿತದ ಕಡೆಗಣನೆಯನ್ನು ಖಂಡಿಸಿದ್ದಾರೆ.

error: Content is protected !!