ಬಜೆಟ್‌ನಿಂದ ರಾಜ್ಯಕ್ಕೆ ನಿರಾಶೆ

ಬಜೆಟ್‌ನಿಂದ ರಾಜ್ಯಕ್ಕೆ ನಿರಾಶೆ

ದಾವಣಗೆರೆ, ಜು.24- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರ ಮಂಡಿಸಿದ ಬಜೆಟ್‌ನಿಂದ ರಾಜ್ಯಕ್ಕೆ  ನಿರಾಶಾದಾಯಕವಾಗಿದೆ ಎಂದು ಜವಾಹರ ಬಾಲ್ ಮಂಚ್‌ನ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಟೀಕಿಸಿದ್ದಾರೆ.

ಮುಂಗಡ ಪತ್ರವು ರಾಜ್ಯಕ್ಕೆ ಯಾವುದೇ ಹೊಸ ಯೋಜನೆ ನೀಡದೇ, ಎನ್‌ಡಿಎ ಮೈತ್ರಿಕೂಟದ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಿರುವುದು ರಾಜ್ಯಕ್ಕೆ ಮಾಡಿದ ಅನ್ಯಾಯ ಮತ್ತು ಮಲತಾಯಿ ಧೋರಣೆ ಎಂದಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ಮಂಡಿಸಿದ್ದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ.ರೂ.ಗಳ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದ ಇವರು, ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ. ಇಂದಿನ ಬಜೆಟ್‌ ಕೂಡ ಮೇಲ್ವರ್ಗದ ಜನರಿಗೆ ಮಾತ್ರ ಅನುಕೂಲ ಮಾಡಿಕೊಡಲಿದ್ದು, ಮೊಬೈಲ್‌, ಚಾರ್ಜರ್‌, ಚಿನ್ನ, ಬೆಳ್ಳಿ ಸೇರಿದಂತೆ ಕೆಲವು ವಸ್ತುವಿನ ದರ ಇಳಿಕೆ ಮಾಡಿದ್ದರೂ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ ಹಾಗಾಗಿ ಇದು ಘೋಷಣೆಗೆಂದು ಮಾಡಿದ ಬಜೆಟ್‌ ಎಂದು ವಿಶ್ಲೇಷಿಸಿದ್ದಾರೆ.

error: Content is protected !!