ಸರ್ವಾಂಗೀಣ ಅಭಿವೃದ್ಧಿಯ ಬಜೆಟ್

ಸರ್ವಾಂಗೀಣ ಅಭಿವೃದ್ಧಿಯ ಬಜೆಟ್

ಮುಂದಿನ 5 ವರ್ಷಗಳ ರಾಷ್ಟ್ರದ ಪ್ರಗತಿಗೆ ಈ ಬಜೆಟ್ ದಿಕ್ಸೂಚಿ ಯಾಗಿದ್ದು, ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಸಾಮಾ ಜಿಕ ನ್ಯಾಯ, ಉತ್ಪಾದನೆ, ಸೇವಾ ವಲಯ, ಮೂಲಸೌಕ ರ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ. ಕೃಷಿ ವಲಯದ ಉತ್ಪಾದಕತೆ ಹೆಚ್ಚಳಕ್ಕೆ ಮತ್ತಷ್ಟು ಅನುಕೂಲ ಕಲ್ಪಿಸಲು 1.52 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ.

ಹಾಗೆಯೇ, ವೇತನ ಪಡೆಯುವ ಉದ್ಯೋಗಿಗಳಿಗೆ ನೆರವಾ ಗಲು ಹೊಸ ತೆರಿಗೆ ಪದ್ಧತಿಯಲ್ಲಿ, ಆದಾಯ ತೆರಿಗೆಯಲ್ಲಿ 17,500 ರೂ.ಗಳವರೆಗೆ ಉಳಿತಾಯ ವಾಗುವಂತೆ ಸುಧಾರಣೆ ತರಲಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕ ನನ್ನು ಸಬಲೀಕರಣಗೊಳಿಸುವ ಮತ್ತು ಸಮೃದ್ಧ, ಸಶಕ್ತ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಸರ್ವಸ್ಪರ್ಶಿ, ಅಭಿವೃದ್ಧಿ ಪೂರಕ ಬಜೆಟ್ ಅನ್ನು ವಿತ್ತ ಸಚಿವರು ಮಂಡಿಸಿದ್ದಾರೆ.

ರೈಲ್ವೆಗೆ ಕೆಲವು ಉತ್ತಮ ಘೋಷಣೆಗಳನ್ನು ಮಾಡಿದರೆ. ಹೊಸ ರೈಲ್ವೆ ಮಾರ್ಗಕ್ಕೆ ಅನುದಾನ, ಹಳೆಯ ಘೋಷಣೆ ಮಾಡಿದ ಮಾರ್ಗಕ್ಕೆ ಹೆಚ್ಚಿನ ಅನುದಾನ ನೀಡಿದು ಹಾಗು ರೈಲು ಮಾರ್ಗ ವಿದ್ಯುದೀಕರಣಕೆ ಒತ್ತು ನೀಡಿದ್ದು ಒಳ್ಳೆಯ ಬೆಳವಣಿಗೆ, ನಮ್ಮ ದೇಶದ, ಪ್ರತಿ ಒಂಧು ರೈಲು ಮಾರ್ಗ ಇನ್ನು ಕೆಲವು ವರ್ಷಗಳಲ್ಲಿ ವಿದ್ಯುತಿಕರಣ ವಾಗಲಿದೆ , ಇದರಿಂದ ನಾವು ಡೀಸೆಲ್ ನಿಂದ ಆಗುವಂತಹ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಹಾಗು ಇದರಿಂದ ರೈಲ್ವೆ ತಗಳುವಂತ ಪ್ರತಿ ಕಿಲೋಮೀಟರ್ , ಖರ್ಚು-ವೆಚ್ಚವನ್ನು ಕಡಿಮೆ ಮಾಡಬಹದು ಹಾಗು ಯಾತ್ರಿ ಗಳಿಗೆ ರೈಲು ಪ್ರಯಾಣ ಕೂಡ ಸುಖಕರ ವಾಗ ಲಿದೆ.ಇದೊಂದು ತುಂಬಾ ಒಳ್ಳೆಯ ಬೆಳವಣಿಗೆ.

  ರೋಹಿತ್  ಎಸ್ . ಜೈನ್, ಕಾರ್ಯದರ್ಶಿ,  ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ, ದಾವಣಗೆರೆ

error: Content is protected !!