ಜಗತ್ತಿನ ಬಲಾಢ್ಯ ರಾಷ್ಟ್ರಗಳು ಇಂದು ಆರ್ಥಿಕವಾಗಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ವಿಶಿಷ್ಟವಾದ ಜನಸ್ನೇಹಿ ಆಯವ್ಯಯವನ್ನು ಮಂಡಿಸಿರುವುದು ಪ್ರಶಂಸನೀಯವಾಗಿದೆ.
ವಿದೇಶಿ ಬಂಡವಾಳ ಹೂಡಿಕೆದಾರರಿಗೆ ತೆರಿಗೆಯನ್ನು ತಗ್ಗಿಸಿರುವ ನಿರ್ಣಯದಿಂದ, ಹೆಚ್ಚು ಕೈಗಾರಿಗೆ ಸ್ಥಾಪನೆಯಾಗಿ ಉದ್ಯೋಗಾವಕಾಶಕ್ಕೆ ಉತ್ತೇಜನ ದೊರೆಯಲಿದೆ. ಸ್ವ ಉದ್ಯೋಗದ ಕಡೆಯೂ ಗಮನ ಹರಿಸಿ ಮುದ್ರಾ ಸಾಲವನ್ನು 20 ಲಕ್ಷದವರೆಗೂ ಹೆಚ್ಚಿಸಲಾಗಿದೆ.
1-4 ಕೋಟಿ ಯುವಕರಿಗೆ employment linked incentive scheme, ಅಡಿಯಲ್ಲಿ ತಿಂಗಳಿಗೆ 5000 ಶಿಷ್ಯವೇತನ ನೀಡುವ ಯೋಜನೆ. ಮಹಿಳಾ ಸಬಲೀಕರಣ ಮತ್ತು ಹೆಣ್ಣು ಮಕ್ಕಳಿಗೆ ಸಾಮಾಜಿಕ ವಾಗಿ ಶಕ್ತಿ ತುಂಬಲು 3 ಲಕ್ಷ ಕೋಟಿ ಬಜೆಟ್ ನಲ್ಲಿ ಮೀಸಲಿಡಲಾಗಿದೆ.
ಸ್ಟಾರ್ಟಪ್, ಹೊಸ ಉದ್ಯೋಗಗಳಿಗಂತೂ ಈ ಬಡ್ಜೆಟ್ ವರದಾನದಂತಿದೆ. ಇಷ್ಟು ದಿನ ಹೇರಲಾಗಿದ್ದ ಏಂಜಲ್ ಟ್ಯಾಕ್ಸ್ ಈಗ ಸಂಪೂರ್ಣ ರದ್ದಾಗಿದೆ. ಇದರಿಂದ ದೇಶದಲ್ಲಿ ಅಸಂಖ್ಯ ಉದ್ಯೋಗಗಳ ಸೃಷ್ಟಿಯಾಗಲಿವೆ.
– ಪ್ರಸನ್ನ ಕುಮಾರ್, ವಿರೋಧ ಪಕ್ಷದ ನಾಯಕರು, ಮಹಾನಗರ ಪಾಲಿಕೆ, ದಾವಣಗೆರೆ.