ವಲಯಗಳ ಪ್ರತಿನಿಧಿತ್ವ ಇಲ್ಲದ ಗೊಂದಲದ ಬಜೆಟ್

ವಲಯಗಳ ಪ್ರತಿನಿಧಿತ್ವ ಇಲ್ಲದ ಗೊಂದಲದ ಬಜೆಟ್

ವಿಕಸಿತ ಭಾರತದ ಕಲ್ಪನೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್ ಯಾವ ವಲಯವನ್ನು ಪ್ರತಿನಿಧಿಸುತ್ತಿದೆ ಎಂಬ ಸ್ಪಷ್ಟತೆಗಳಿಲ್ಲದೇ ಗೊಂದಲ ಮೂಡಿಸಿದೆ.

ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯಗಳಿಗೆ ಏನು ಕೊಟ್ಟಿದ್ದಾರೆ ಎಂಬುದನ್ನು ನೋಡಬೇಡಿ, ದೇಶದ ಅಭಿವೃದ್ದಿ ಕಡೆ ಗಮನ ಹರಿಸಿ ಎಂಬ ಅರ್ಥದಲ್ಲಿ ಬಜೆಟ್ ಮಂಡಿಸಲಾಗಿದ್ದರೂ, ಬಿಹಾರ ಮತ್ತು ಆಂದ್ರ ಪ್ರದೇಶಕ್ಕೆ ನೀಡಿದ ಸಾವಿರಾರು ಕೋಟಿ ರುಪಾಯಿ ಅನುದಾನದ ಭರವಸೆ ಏನನ್ನು ಹೇಳುತ್ತದೆ ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಬೇಕು.

ಬಿಜೆಪಿ ಸರ್ಕಾರದ ಮಿತ್ರಪಕ್ಷಗಳೆಂಬ ಕಾರಣಕ್ಕೆ ಬಿಹಾರಕ್ಕೆ 25 ಸಾವಿರ ಕೋಟಿ ಹಾಗೂ ಆಂದ್ರಪ್ರದೇಶಕ್ಕೆ 15 ಸಾವಿರ ಕೋಟಿ ರುಪಾಯಿ ವೆಚ್ಚದ ಯೋಜನೆ ಘೋಷಿಸಲಾಗಿದೆ. ದೇಶದ ಇತರೆ ರಾಜ್ಯಗಳು ಏನು ಪಾಪ ಮಾಡಿದ್ದವು.  ಕೃಷಿಗೆ 1.52 ಲಕ್ಷ ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ ಎಂದು ಬಜೆಟ್ ಉಲ್ಲೇಖವಿದೆ. ಏನು ಮಾಡಲಾಗುತ್ತದೆ ಎಂಬ ಬಗ್ಗೆ ನಿಖರತೆ ಇಲ್ಲ.

ಆದಾಯ ತೆರಿಗೆಯಲ್ಲಿ 3 ರಿಂದ 7ಲಕ್ಷದವರೆಗೆ ಶೇ.5ರಷ್ಟು ತೆರಿಗೆ ಎಂಬ ಪ್ರಸ್ತಾಪ ಗೊಂದಲ ಮೂಡಿಸಿದೆ. ಕ್ಯಾನ್ಸರ್ ಔಷಧಕ್ಕೆ ರಿಯಾಯಿತಿ ತೋರಿರುವ ಕೇಂದ್ರ ಮಧ ಮೇಹವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ವಿಷಾದ. ಭದ್ರಾ ಮೇಲ್ದಂಡೆಗೆ ಕಳೆದ ಬಜೆಟ್‌ನಲ್ಲಿ 5300 ಕೋಟಿ ರೂ. ಘೋಷಿಸಿ, ಇದುವರೆಗೂ ನಯಾ ಪೈಸೆ ಬಿಡುಗಡೆ ಮಾಡಿಲ್ಲ.  ಹಾಗಾಗಿ ಬಜೆಟ್ ಘೋಷಣೆಗಳ ಬಗ್ಗೆ ಜನರಿಗೆ ನಂಬಿಕೆಗಳು ಕಡಿಮೆಯಾಗಿವೆ.

 – ಎಲ್.ಹೆಚ್.ಅರುಣ್‌ಕುಮಾರ್, ಜಿಲ್ಲಾಧ್ಯಕ್ಷರು, ವಕೀಲರ ಸಂಘ, ದಾವಣಗೆರೆ.

error: Content is protected !!