ರಾಣೇಬೆನ್ನೂರು, ಜು. 22- ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಜಿಲ್ಲಾ ಘಟಕ, ಹಾವೇರಿಯ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಈಚೆಗೆ ಚುನಾವಣೆ ನಡೆದಿದ್ದು, ಜಿಲ್ಲಾಧ್ಯಕ್ಷರಾಗಿ ನಾಗರಾಜ ನಲವಾಗಲ, ಪ್ರಧಾನ ಕಾರ್ಯದರ್ಶಿಯಾಗಿ ಮಾಲತೇಶ ಮುದುಕಪ್ಪನವರ, ಉಪಾಧ್ಯಕ್ಷರಾಗಿ ಜೆ.ಬಿ. ಅಂಗಡಿ, ಖಜಾಂಚಿಯಾಗಿ ಎಂ. ವಿನೋದ, ಸಹ ಕಾರ್ಯದರ್ಶಿಯಾಗಿ ಮಹೇಶ್ ಪಾಟೀಲ್, ಸಂಘಟನಾ ಕಾರ್ಯದರ್ಶಿಯಾಗಿ ಆರ್.ಎಸ್. ಪಾಟೀಲ್ ಆಯ್ಕೆಯಾಗಿದ್ದಾರೆ.
ಸಂಘದ ರಾಜ್ಯ ಪ್ರತಿನಿಧಿ ಮಲ್ಲಿಕಾರ್ಜುನ ಬಾವಿಕಟ್ಟಿ ಚುನಾವಣಾ ಫಲಿತಾಂಶದ ನಂತರ ಮಾತನಾಡಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒಂದು ಬಲಿಷ್ಠ ಸಂಘಟನೆಯಾಗಿ, ಶಿಕ್ಷಕರ ಅನೇಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಶಾಶ್ವತ ಪರಿಹಾರ ಕಂಡುಕೊಳ್ಳಲು ಅವಿರತವಾಗಿ ಶ್ರಮಿಸುತ್ತಿದೆ. ಇಂತಹ ಸಮಯದಲ್ಲಿ ಆಯ್ಕೆಯಾಗಿರುವ ನೂತನ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾ ಹಂತದಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ರಾಜ್ಯ ಸಂಘಟನೆಗೆ ಬಲ ನೀಡಲು ಶ್ರಮಿಸಬೇಕು. ಜೊತೆಗೆ ನಮ್ಮ ಬಹು ದಿನಗಳ ಬೇಡಿಕೆಗಳಾದ ಕಾಲ್ಪನಿಕ ವೇತನ, ಹಳೆಯ ಪಿಂಚಣಿ ಜಾರಿಗೆ, ಜ್ಯೋತಿ ಸಂಜೀವಿನಿ ಸೇರಿದಂತೆ ಇನ್ನಿತರೆ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಎಸ್.ಎನ್.ಮಡಿವಾಳರ, ಉಪಚುನಾವಣಾಧಿಕಾರಿ ಎಸ್.ಕೆ. ಪೊಲೀಸಗೌಡರ, ಮಾಜಿ ಜಿಲ್ಲಾಧ್ಯಕ್ಷ ಎಂ.ಸಿ. ಮುದಿಗೌಡ್ರು, ಮಾಜಿ ಕಾರ್ಯದರ್ಶಿ ಮಾರುತಿ ಲಮಾಣಿ, ಎಸ್.ಹೆಚ್. ಪಾಟೀಲ್, ಸಂತೋಷ್ ದೊಡ್ಡಮನಿ, ಬಸವರಾಜ್ ನಾಯಕ್, ಪೊಲೀಸ್ ಗೌಡ್ರು, ಡಿ.ಎಮ್. ಮಲ್ಲಾಪುರ, ವಿ.ಎಂ. ಕಬ್ಬಿಣಕಂತಿ ಮಠ, ಆರ್. ಎಸ್. ತೆಂಬದಮನಿ, ಎಂ.ಎಚ್. ಪಾಟೀಲ್, ಶಿವಾನಂದಪ್ಪ ಕೆ., ಮಾಲತೇಶ ಹಿರೇಮಠ, ಜಿ.ಬಿ. ರಾಯಚೂರ, ಸದಾ ಸವಣೂರು, ಆರ್.ಎಚ್. ಬಡಿಗೇರ್, ಮಲ್ಲಿಕಾರ್ಜುನ, ಸಂತೋಷ್ ಮಡಿವಾಳರ, ಆರ್.ಎಸ್. ಪಾಟೀಲ್, ಎನ್. ಆರ್. ಭಗವಂತ ಗೌಡ್ರು, ಆರ್.ವೈ. ಮಾಲಿನ, ರಮೇಶ್ ನಾಯಕ್, ಪ್ರದೀಪ್ ಕೃಷ್ಣಣ್ಣನವರ್, ಜಿ.ಸಿ. ಹೊಸಗೌಡ್ರು, ಬಿ.ವಿ. ಪಾಟೀಲ್ ಉಪಸ್ಥಿತರಿದ್ದರು.