ಹರಿಹರ, ಜು. 22 – ತಾಲ್ಲೂಕಿನ ಕುಂಬಳೂರು ಗ್ರಾಮದ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮಕ್ಕಳಲ್ಲಿ ಸದೃಢ ಆರೋಗ್ಯಕ್ಕಾಗಿ ಸದೃಢ ಆಹಾರದ ಮಹತ್ವ ತಿಳಿಸುವ ಹಾಗೂ ಸಹ ಭೋಜನ ಪದ್ಧತಿ ಬೆಳೆಸುವ ಹಿನ್ನೆಲೆಯಲ್ಲಿ ಟಮ್ಮಿ ಟ್ರೀಟ್ ಡೇ ಕಾರ್ಯಕ್ರಮವನ್ನು ನಿನ್ನೆ ನಡೆಸಲಾಯಿತು.
ಅಲ್ಲಲ್ಲೇ ದುಂಡು ಮೇಜಿನ ಮೂಲಕ ಹಲವು ಗುಂಪುಗಳಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳನ್ನು ಕೂರಿಸಲಾಗಿತ್ತು. ವಿದ್ಯಾರ್ಥಿಗಳು ಮನೆಯಿಂದ ತಂದಿದ್ದ ಸಿಹಿ ತಿಂಡಿ , ತರಕಾರಿ, ರೊಟ್ಟಿ, ಪಲ್ಯ, ಬುತ್ತಿ, ಚೊಂಗಿ, ಡ್ರೈ ಫ್ರೂಟ್ ಸೇರಿದಂತೆ ವಿವಿಧ ಪೋಷಕಾಂಶಯುಕ್ತ ಪದಾರ್ಥಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಭೋಜನ ಸವಿದರು.
ವಿದ್ಯಾರ್ಥಿಗಳೊಂದಿಗೆ ಆಡಳಿತಾಧಿಕಾರಿ ಎಸ್.ಕೆ. ಕುಮಾರ್, ಪ್ರಾಂಶುಪಾಲ ಚೇತನ್ ಕುಮಾರ್, ಉಪ ಪ್ರಾಂಶುಪಾಲ ಅಖಿಲೇಶ್ವರಿ ಹಾಗೂ ಎಲ್ಲಾ ಶಿಕ್ಷಕರು ಸಹ ಜೊತೆಯಲ್ಲಿ ಕೂತು ಊಟ ಮಾಡಿದ ದೃಶ್ಯ ಹಬ್ಬದ ವಾತಾವರಣ ನಿರ್ಮಿಸಿತ್ತು.