ದಾವಣಗೆರೆ, ಜು. 22 – ಈಚೆಗೆ ನಡೆದ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಇಂಡಿಯನ್ ಕರಾಟೆ ಅಕಾಡೆಮಿಯ ಕರಾಟೆ ಪಟುಗಳು ಕತಾ ಹಾಗೂ ಕುಮಿಟೆಗಳಲ್ಲಿ ವಿಜೇತರಾಗಿ ಟ್ರೋಫಿಗಳನ್ನು ಪಡೆದರು.
ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಇಂಟರ್‌ನ್ಯಾಷನಲ್ ಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ಡಿ.ಸಿ. ಸುರೇಶ್, ಮುಖ್ಯ ಕರಾಟೆ ಮಾಸ್ಟರ್‌ಗಳಾದ ಸೆನ್ಸಯ್ ಹನುಮಂತ, ಸಮೀರ್ ಹಾಗೂ ವಿಜೇತರಾದ ದೀಕ್ಷಿತ್ ಉಗ್ಡೆ ಆರ್., ಪ್ರಥಮ್ ಡಿ.ಕೆ., ಸ್ನೇಹ ಎಂ.ಬಿ. ವಿನೀಷ್ ಕೆ.ಎಂ., ಹಾಗೂ ವಂಶಿಕಾ ಎಂ. ಉಪಸ್ಥಿತರಿದ್ದರು.