ಸೇಂಟ್‌ಜಾನ್ಸ್ ಶಾಲೆಯಲ್ಲಿ ಮಿಲ್ಕ್‌ಡೇ ಆಚರಣೆ

ಸೇಂಟ್‌ಜಾನ್ಸ್ ಶಾಲೆಯಲ್ಲಿ ಮಿಲ್ಕ್‌ಡೇ ಆಚರಣೆ

ದಾವಣಗೆರೆ, ಜು. 22- ಬಿಳಿಬಣ್ಣವೆಂದರೆ ಶಾಂತಿಯ ಸಂಕೇತ, ಪರಿಶುದ್ಧತೆಯ ಪ್ರತೀಕವೆಂಬಂತೆ ನಗರದ ಸೇಂಟ್‍ಜಾನ್ಸ್ ವಿದ್ಯಾಸಂಸ್ಥೆಯ ನರ್ಸರಿ ವಿಭಾಗದ ಮಕ್ಕಳು ಬಿಳಿಯ ಬಣ್ಣದ ವಸ್ತ್ರವನ್ನು ಧರಿಸಿ `ಮಿಲ್ಕ್ ಡೇ’ ಆಚರಿಸಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಅನಿಲ್ ಕುಮಾರ್‍, ಕಾರ್ಯದರ್ಶಿ  ಉಮಾಪತಯ್ಯ ಹಾಗೂ ಖಜಾಂಚಿ ಪ್ರವೀಣ್ ಹುಲ್ಲುಮನೆ ಮಕ್ಕಳಿಗೆ ಬಾದಾಮಿ ಹಾಲನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಸೈಯ್ಯದ್ ಆರಿಫ್ ಆರ್.  ಗೋಮಾತೆಯಲ್ಲಿರುವ ಹಾಲಿನ ಪೌಷ್ಟಿಕಾಂಶಗಳ ಬಗ್ಗೆ ತಿಳಿಸಿದರು.  ಪ್ರಾಂಶುಪಾಲರಾದ ಶ್ರೀಮತಿ ಟಿ. ಪ್ರೀತಾ ರೈ, ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ, ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!