ದಾವಣಗೆರೆ ಜು. 22- ತಾಲ್ಲೂಕಿನ ಎಲೆಬೇತೂರು ಗ್ರಾಮದ ಶ್ರೀ ವಿನಾಯಕ ಕಾನ್ವೆಂಟ್ ಶಾಲೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ತ ಕೇಂದ್ರ, ಚಿಗಟೇರಿ ಜಿಲ್ಲಾಸ್ಪತ್ರೆ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಶಾಲಾ ಆವರಣದಲ್ಲಿ ನಾಡಿದ್ದು ದಿನಾಂಕ 24ರ ಬುಧವಾರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಶಾಲಾ ಪೋಷಕರು, ಗ್ರಾಮದ ಸಾರ್ವಜನಿಕರು ಹಾಗೂ ಸುತ್ತಮುತ್ತಲು ಗ್ರಾಮದ ರಕ್ತದಾನ ಮಾಡುವ ಮನಸ್ಸುಗಳು ಈ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಕ್ತದಾನ ಮಾಡುವಂತೆ ಹಾಗೂ ರಕ್ತದಾನ ಮಾಡುವವರು ಹೆಸರು ನೋಂದಾಯಿಸುವಂತೆ ಶಾಲೆಯ ಮುಖ್ಯೋಪಾಧ್ಯಾಯರಾದ ಜಿ.ಎಂ. ಲತಾ (9880962671) ತಿಳಿಸಿದ್ದಾರೆ.
January 10, 2025