ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಹುಣ್ಣಿಮೆ ಕಾರ್ಯಕ್ರಮ

ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಹುಣ್ಣಿಮೆ ಕಾರ್ಯಕ್ರಮ

ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಗುರು ಪೂರ್ಣಿಮೆ ಹಾಗೂ ಫ.ಗು. ಹಳಕಟ್ಟಿಯವರ ಜಯಂತ್ಯೋತ್ಸವ ಕಾರ್ಯಕ್ರಮವು ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಇಂದು  ಸಂಜೆ 5 ಗಂಟೆಗೆ ನಡೆಯಲಿದೆ.  ಗುರು ಪೂರ್ಣಿಮೆ  ಕುರಿತು ಶ್ರೀಮತಿ ಮಂಜುಳ ಕಾಯಿ ಹಾಗೂ ಫ.ಗು ಹಳಕಟ್ಟಿ ಕುರಿತು ಸುಧಾ ಅಜ್ಜಂಪುರ ಮಾತನಾಡುವರು. ಅಕ್ಕಮಹಾದೇವಿ ಸಮಾಜದ ಅಧ್ಯಕ್ಷರಾದ ಕೆ.ಕೆ‌. ಸುಶೀಲಮ್ಮ ಅಧ್ಯಕ್ಷತೆ ವಹಿಸಲಿದ್ದು, ನೀಲಗುಂದ ಜಯಮ್ಮ ಅವರು ಚಿಂತನ-ಮಂಥನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 

ಶ್ರೀಮತಿ ಜ್ಯೋತ್ಸ್ನಾ ಶ್ರೀಕಂಠನ್ ಅವರು ಪ್ರಾತ್ಯಕ್ಷಿಕೆಯ ಪಾನೀಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ‌ ಎಂದು ಸಮಾಜದ ಕಾರ್ಯದರ್ಶಿ ಸುವರ್ಣ ದೊಗ್ಗಳ್ಳಿ ತಿಳಿಸಿದ್ದಾರೆ.

error: Content is protected !!