ಜಗಳೂರು, ಜು. 21 – ನಾಡಿದ್ದು ದಿನಾಂಕ 23 ರ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಧರಣಿಗೆ ತಾಲ್ಲೂಕಿನಿಂದ 150ಕ್ಕೂ ಅಧಿಕ ಗ್ರಾ.ಪಂ. ನೌಕರರು ಭಾಗವಹಿ ಸಲಿದ್ದಾರೆ ಎಂದು ಸಿಐಟಿಯು ಸಂಯೋ ಜಿತ ಗ್ರಾ.ಪಂ. ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಹಾಂತೇಶ್ ಸಿದ್ದಮ್ಮನಹಳ್ಳಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 263 ಜನ ಬಿಲ್ ಕಲೆಕ್ಟರ್, ಜವಾನರು, ನೀರಗಂಟಿಗಳನ್ನೊಳಗೊಂಡಂತೆ 263 ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು. ಸೂಕ್ತ ಸಾಮಾಜಿಕ, ಆರ್ಥಿಕ, ಭದ್ರತೆಯಿಲ್ಲದೆ ಕೇವಲ ಸರ್ಕಾರದ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾ ಸೇವೆಗೈಯ್ಯುತ್ತಿದ್ದೇವೆ. ರೂ. 6000 ಪಿಂಚಣಿಗಾಗಿ ಆರೋಗ್ಯ ವಿಮೆಗಾಗಿ, ಕನಿಷ್ಟ ವೇತನ ರೂ. 31,000 ,ಇ – ಹಾಜರಾತಿ ವಾಪಸ್ಸಾತಿಗಾಗಿ, ಕರ ವಸೂಲಿಗಾರ, ಗಣಕಯಂತ್ರ ಸಹಾಯಕ ನೌಕರರ ನೇರ ನೇಮಕಾತಿಗೆ ಲೆಕ್ಕಸಹಾಯಕ, ಗ್ರೇಡ್ -2, ಗ್ರೇಡ್-1 ಕಾರ್ಯದರ್ಶಿ ಮತ್ತು ಪಿಡಿಓ ಹುದ್ದೆಗಳ ಮುಂಬಡ್ತಿ ಕೋಟಾ ಹೆಚ್ಚಳಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.