ಹರಿಹರ,ಜು.21- ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಷಂಷೀಪುರ ಗ್ರಾಮದ ಪ್ರದೀಪ ಮತ್ತು ಬಸವರಾಜ ಅಲಿಯಾಸ್ ಬಸ್ಯ ಎಂಬುವವರನ್ನು ಬಂಧಿಸಿ ಅವರಿಂದ 2.20 ಲಕ್ಷ ಮೌಲ್ಯದ ಹಣ ಹಾಗೂ ಬೆಳ್ಳಿ- ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ತನಿಖೆ ಮುಂದುವರೆದಿದೆ. ಕಳೆದ ವರ್ಷ ಈ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ ಸಗರಿ ನೇತೃತ್ವದಲ್ಲಿ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ ಎಸ್. ಕುಪ್ಪೇಲೂರು ಮಾರ್ಗದರ್ಶನದಲ್ಲಿ
ಹರಿಹರ ಗ್ರಾಮಾಂತರ ಠಾಣೆ
ಸಿಬ್ಬಂದಿಗಳಾದ ಎ.ಎಸ್.ಐ ತಿಪ್ಪೇಸ್ವಾಮಿ, ರಾಮಚಂದ್ರಪ್ಪ, ರಸೂಲ್, ಸಿಬ್ಬಂದಿ ವರ್ಗದ ಕರಿಯಪ್ಪ, ರಮೇಶ, ನೀಲಮೂರ್ತಿ, ಇಲಿಯಾಜ್, ನಾಗರಾಜ, ಚನ್ನಕೇಶವ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ, ಹನುಮಂತ, ನವೀನ್ ಕುಮಾರ್, ಗಂಗಾಧರ ದ್ವಾರಕೇಶ, ನಾಗರಾಜ, ಋಶಿರಾಜ, ಪ್ರಸನ್ನಕಾಂತ, ಸುರೇಶ, ರಾಮಾಂಜನೇಯ, ರೂಪಾ, ಸಿದ್ದಪ್ಪ ಮುರುಳಿ ಒಳಗೊಂಡ ತಂಡವು ಕಳ್ಳರನ್ನು ಪತ್ತೆಹಚ್ಚಿ ಬಂಧಿಸಿದೆ.