ಎಸ್‌ಎಸ್ಎನ್‌ಪಿ ಶಾಲೆಯಲ್ಲಿ ಸಂಸ್ಥಾಪಕರ ದಿನ

ಎಸ್‌ಎಸ್ಎನ್‌ಪಿ ಶಾಲೆಯಲ್ಲಿ ಸಂಸ್ಥಾಪಕರ ದಿನ

ದಾವಣಗೆರೆ, ಜೂ. 19- ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ಶಾಮನೂರು ಶಿವಶಂಕರಪ್ಪನವರ 94ನೇ ಹುಟ್ಟುಹಬ್ಬದ ಪ್ರಯುಕ್ತ ಡಾ. ಎಸ್ಎಸ್ಎನ್‌ಪಿ ಶಾಲೆಯಲ್ಲಿ ಫೌಂಡರ್‌ ಡೇ ಎಂಬ ವಿನೂತನ ಕಾರ್ಯಕ್ರಮ  ಆಯೋಜಿಸಲಾಗಿತ್ತು. 

ಬಾಪೂಜಿ ವಿದ್ಯಾಸಂಸ್ಥೆಯ ಡೀನ್  ಮಂಜುನಾಥ ರಂಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕರಾದ ರವೀಂದ್ರ ಅರಳುಗುಪ್ಪಿ ಅವರು ಶಾಮನೂರು ಶಿವಶಂಕರಪ್ಪ ಅವರನ್ನೇ ಹೋಲುವ ವೇಷಭೂಷಣ  ಧರಿಸಿದ್ದು ವಿಶೇಷವಾಗಿತ್ತು. ಅವರಿಗೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ  ಕೊಡುತ್ತಾ, ಸಭಿಕರೆಲ್ಲರೂ ಆಶ್ಚರ್ಯಚಕಿತರಾಗುವಂತೆ ಮಾಡಿದರು. 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡೀನ್ ಮಂಜುನಾಥ ರಂಗರಾಜು ಅವರು ಎಸ್ಸೆಸ್ ಅವರ ಕುರಿತು  ಮಾತನಾಡುತ್ತಾ, ಇಂದು ದಾವಣಗೆರೆ ಇಷ್ಟೊಂದು ಅಭಿವೃದ್ಧಿ ಕಾಣಬೇಕಾದರೆ ಎಸ್ಸೆಸ್ ಕೊಡುಗೆ ಅಪಾರ ವಾಗಿದೆ. ಇವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ, ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಅಪಾರವಾದ ಅಭಿವೃದ್ಧಿ ಮಾಡಿದ್ದರಿಂದ ಇಂದು ದಾವಣಗೆರೆಯ ಅತ್ಯುನ್ನತ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ  ಡಾ. ಎಸ್ಎಸ್ಎನ್‌ಪಿ  ಉಪಪ್ರಾಂಶುಪಾಲ ರಮೇಶ್‌ ಬಾಬು, ಶಾಲಾ ಸಂಯೋಜಕರಾದ ಶ್ರೀಮತಿ ರುತಿಕಾ ಮತ್ತು ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಪ್ರಾಂಶುಪಾಲರಾದ ಶ್ರೀಮತಿ ಕಮಲ ಬಿ. ನಾರಾಯಣ ವಹಿಸಿಕೊಂಡಿದ್ದರು.

error: Content is protected !!