ದಾವಣಗೆರೆ, ಜು. 19 – ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸುವ ದೇಶದ ಪ್ರಮುಖ ಪರೀಕ್ಷೆಗಳಲ್ಲೊಂದಾದ `ಚಾರ್ಟರ್ಡ್ ಅಕೌಂಟೆಂಟ್’ (C.A.) ಅಂತಿಮ ಪರೀಕ್ಷೆಯಲ್ಲಿ ನಗರದ ಎ.ಸಿ. ನಂದನ್ ಉತ್ತೀರ್ಣರಾಗಿದ್ದಾರೆ.
ಸ್ಥಳೀಯ ಸರ್ ಎಂ.ವಿ. ಕಾಲೇಜಿನಲ್ಲಿ ಪಿಯುಸಿ (ವಿಜ್ಞಾನ) ಪೂರೈಸಿದ್ದ ನಂದನ್, ಹೈದರಾಬಾದ್ನ ತಪಸ್ಯಾ ಅಕಾಡೆಮಿಯಲ್ಲಿ ಸಿಎ ಫೌಂಡೇಶನ್ (ಸಿಪಿಟಿ) ಮತ್ತು ಸಿಎ ಇಂಟರ್ ತರಬೇತಿ ಪಡೆದು ಬೆಂಗಳೂರಿನಲ್ಲಿ ಸಿಎ ಅಂತಿಮ ಪರೀಕ್ಷೆಯನ್ನು ಬರೆದಿದ್ದರು.
ಪ್ರಸ್ತುತ ಬೆಂಗಳೂರಿನ ಬಿ.ಕೆ. ರಾಮಧ್ಯಾನಿ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಂದನ್, ರಾಜ್ಯದ ಮಹಾನಗರಗಳಲ್ಲದೇ ಹೈದರಾಬಾದ್, ತಮಿಳುನಾಡು, ಮುಂಬೈ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಆಡಿಟ್ ಕೆಲಸ ನಿರ್ವಹಿಸಿದ್ದಾರೆ.
ಗಾಯಕರೂ ಆಗಿರುವ ಅವರು, ಸಂಗೀತ ಸಂಯೋಜಕ ಮತ್ತು ಸಾಹಿತ್ಯ ಬರಹಗಾರರೂ ಹೌದು. ನಂದನ್, ನಿಟುವಳ್ಳಿಯ ಪಿ.ಎಂ. ಶ್ರೀ ಆರ್.ಎಂ.ಎಸ್.ಎ. ಸರ್ಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕರೂ, ಗಾಯಕರೂ ಆಗಿರುವ ಸಿ.ಅಜಯ್ ನಾರಾಯಣ್ ಮತ್ತು ಸೀತಮ್ಮ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ತ್ರಿವೇಣಿ ದಂಪತಿ ಪುತ್ರ. ನಂದನ್ ಸಹೋದರಿ ಶ್ರೀಮತಿ ಮೇಘ ಕೌಶಿಕ್ ಆರ್ಕಿಟೆಕ್ಟ್ ಆಗಿದ್ದಾರೆ.