ಮಲೇಬೆನ್ನೂರು: ರಸ್ತೆ ಅಭಿವೃದ್ಧಿಗೆ ಆಗ್ರಹ

ಮಲೇಬೆನ್ನೂರು: ರಸ್ತೆ ಅಭಿವೃದ್ಧಿಗೆ ಆಗ್ರಹ

ಮಲೇಬೆನ್ನೂರು, ಜು. 19 – ಇಲ್ಲಿನ ಪುರಸಭೆ ಕಛೇರಿ ಕಟ್ಟಡಕ್ಕೆ ಹೊಂದಿಕೊಂಡಿರುವ ಮತ್ತು ರೈತ ಸಂಪರ್ಕ ಕೇಂದ್ರ, ನಾಡಕಛೇರಿ, ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ಹಾಗೂ ಬಾಲಕರ ಹಾಸ್ಟೆಲ್‌, ಶಾಲಾ-ಕಾಲೇಜುಗಳಿಗೆ ಸಂಪರ್ಕಿಸುವ ರಸ್ತೆ ಕೆಸರು ಗದ್ದೆಯತಾಗಿದ್ದು, ಇಲ್ಲಿ ಸಂಚರಿಸುವವರು ಜಾರಿ ಬೀಳುವಂತಿದೆ. ಮಳೆಗಾಲ ಇನ್ನೂ 2-3 ತಿಂಗಳು ಇರುವುದರಿಂದ ಸಂಬಂಧಪಟ್ಟವರು ಕೂಡಲೇ ಈ ಸಣ್ಣ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಆಗುವ ತೊಂದರೆ ತಪ್ಪಿಸಬೇಕೆಂದು ಭಾನುವಳ್ಳಿ ಸುರೇಶ್ ಒತ್ತಾಯಿಸಿದ್ದಾರೆ..

error: Content is protected !!