ಜಗಳೂರು ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

ಜಗಳೂರು ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

ಜಗಳೂರು, ಜು. 18 –  ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಂಜುಂಡಸ್ವಾಮಿ ಬಣದ ವತಿಯಿಂದ  ತಹಶಿಲ್ದಾರ್ ಅವರಿಗೆ ವಿಸಲ್ಲಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಹಾತ್ಮಗಾಂಧಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಕಚೇರಿವರೆಗೂ ಬೈಕ್‌ನಲ್ಲಿ ಮೆರೆವಣಿಗೆ ನಡೆಸಿ ನಂತರ ಮಾತನಾಡಿದ‌ರು.

ತಾಲ್ಲೂಕು ಅಧ್ಯಕ್ಷ ಗಡಿಮಾಕುಂಟೆ ಬಸವರಾಜಪ್ಪ ಮಾತನಾಡಿ,’ಚಳ್ಳಕೆರೆ ದಾವಣಗೆರೆ ರಸ್ತೆ ಮತ್ತು  ಭರಮ ಸಮುದ್ರ ಹಾಗೂ ದೊಣೆಹಳ್ಳಿ ಕೂಡು ರಸ್ತೆಗಳನ್ನು ಅಭಿವೃದ್ದಿ ಪಡಿಸಬೇಕು. ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ, ಭಾರೀ ಪ್ರಮಾಣ ಹೊತ್ತು ಸಂಚರಿಸುವ ಖಾಸಗೀ ವಾಹನಗಳಿಗೆ ತೀವ್ರ ತೊಂದರೆ ಯಾಗಿದೆ ಎಂದರು.

ಜಂಟಿ ಕಾರ್ಯದರ್ಶಿ ಕುಮಾರ್ ಭರಮ ಸಮುದ್ರ  ಮಾತನಾಡಿ, ಪಟ್ಟಣದ ಮುಖ್ಯ ರಸ್ತೆಯ ಇಕ್ಕೆಲಗಳ ವರ್ತಕರು ರಸ್ತೆ ಅಗಲೀಕರಣ ಕುರಿತು ರಾಜಕಾರಣದ ಹುನ್ನಾರ ನಡೆಸಲಾಗುತ್ತಿದೆ. ನೆರೆ ಹೊರೆಯ ತಾಲ್ಲೂಕುಗಳಲ್ಲಿ ಸೇರಿದಂತೆ ವಿಧಾನ ಸಭಾ ಕ್ಷೇತ್ರದ ಅರಸೀಕೆರೆಯಲ್ಲಿ ರಸ್ತೆ ವಿಸ್ತರಣೆಯಾಗಿದೆ. ಜಗಳೂರು ಪಟ್ಟಣ ದಿನದಿಂದ ದಿನಕ್ಕೆ ಪಟ್ಟಣ ಸರ್ವತೋಮುಖ ಅಭಿವೃದ್ದಿಗೊಳ್ಳುತ್ತಿದೆ. ಶಾಸಕರು ಶೀಘ್ರ ರಸ್ತೆ ಅಗಲೀಕರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಟಿ. ಲಕ್ಷ್ಮಣ ನಾಯಕ, ಲೋಕಣ್ಣ, ಡಿ.ಎಸ್.ಎಸ್. ತಾಲ್ಲೂಕು ಅಧ್ಯಕ್ಷ ಕುಬೇಂದ್ರಪ್ಪ, ಪಲ್ಲಾಗಟ್ಟೆ ರಂಗಪ್ಪ, ಪಾಂಡು, ರೈತ ಸಂಘಟನೆ ಮುಖಂಡ ಮಾರಪ್ಪ, ಭರಮಪ್ಪ, ರಾಜಪ್ಪ, ಚೌಡಪ್ಪ, ರಾಜಪ್ಪ, ಮಂಜಪ್ಪ, ರಾಜು, ಶಿವಣ್ಣ, ಪಾಲನಾಯಕ, ಓಬಯ್ಯ, ಸತೀಶ್, ಸೇರಿದಂತೆ ಭಾಗವಹಿಸಿದ್ದರು.

error: Content is protected !!