ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶೀ ಕೇಂದ್ರ ಸ್ವಾಮಿಗಳ ಆಷಾಢ ಮಾಸದ ಇಷ್ಟಲಿಂಗ ಪೂಜೆ ಜನಜಾಗೃತಿ ಸಮಾರಂಭ ರಾಣೇಬೆನ್ನೂರಿನ ಶ್ರೀ ಚನ್ನೇಶ್ವರ ಮಠದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.
ಇಂದು ಸಂಜೆ ಪೂರ್ಣಕುಂಭದೊಂದಿಗೆ ಸ್ವಾಗತ. ನಂತರ ಧರ್ಮಸಭೆ, ನಾಳೆ ಶನಿವಾರ ಬೆಳಿಗ್ಗೆ ಇಷ್ಟಲಿಂಗ ಪೂಜೆ, ಸಂಜೆ ಧರ್ಮ ಸಭೆ, ನಾಡಿದ್ದು ಭಾನುವಾರ ಬೆಳಿಗ್ಗೆ ಇಷ್ಟಲಿಂಗ ಪೂಜೆ ನಂತರ ಧರ್ಮಸಭೆ ನಡೆಯಲಿದೆ. ಮೂರು ದಿನಗಳ ಧರ್ಮಸಭೆ ನಂತರ ಅನ್ನ ಸಂತರ್ಪಣೆ ಇರುತ್ತದೆ.
ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶ್ರೀ, ಆವರಗೊಳ್ಳ ಓಂಕಾರ ಶ್ರೀ, ಶನೇಶ್ಚರ ಮಠದ ಶಿವಯೋಗಿ ಶ್ರೀ, ನಗರದ ಗುರುಬಸವ ಸ್ವಾಮಿಗಳು, ದಿಂಡದಹಳ್ಳಿ ಪಶುಪತಿ ಸ್ವಾಮಿಗಳು, ಕೋಣಂದೂರು ಸಿದ್ದವೀರ ಸ್ವಾಮಿಗಳು, ನೆಗಳೂರ ಗುರುಶಾಂತೇಶ್ವರ ಸ್ವಾಮಿಗಳು, ಲಿಂಗದಹಳ್ಳಿ ವೀರಭದ್ರ ಸ್ವಾಮಿಗಳು, ಮಣಕೂರ ಮಲ್ಲಿಕಾರ್ಜುನ ಸ್ವಾಮಿಗಳು, ರಟ್ಟಿಹಳ್ಳಿ ಶಿವಲಿಂಗ ಸ್ವಾಮಿಗಳು ಪಾಲ್ಗೊಳ್ಳುವರು.
ಉಪ ಸಭಾಪತಿ ರುದ್ರಪ್ಪ ಲಮಾಣಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ್ ಪೂಜಾರಿ, ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರಿ ಹಾಗೂ ಜನಪ್ರತಿನಿಧಿಗಳು ಭಾವಹಿಸುವರು ಎಂದು ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಪಟ್ಟಣ ಶೆಟ್ಟಿ, ಶಂಭು ಷಡಾಕ್ಷರಿ ಮಠ, ಜೆ.ಎನ್. ಸುರಳಿಕೇರಿ ಮಠ ತಿಳಿಸಿದರು.