ದಾವಣಗೆರೆ, ಜು. 17 – ನಗರದಲ್ಲಿ ನಡೆದ ಪ್ರಥಮ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್-2024 `ಬೆಣ್ಣೆ ನಗರಿ ಕಪ್’ನ್ನು ಲಯನ್ಸ್ ಕ್ಲಬ್ ಶಾಲೆ ಹಾಗೂ ದೇವರಾಜ ಅರಸು ಬಡಾವಣೆಯ ಸ್ವಿಮ್ಮಿಂಗ್ ಪೂಲ್ ಹತ್ತಿರದಲ್ಲಿ ಅಭ್ಯಾಸ ಮಾಡುತ್ತಿರುವ ಕರಾಟೆ ಕ್ರೀಡಾಪಟುಗಳು ಭಾಗವಹಿಸಿ ವಿಜೇತರಾಗಿದ್ದಾರೆ.
ಬಾಲಕಿಯರ 9 ವರ್ಷದೊಳಗಿನ ವಿಭಾಗದಲ್ಲಿ ಸಮರ್ಥ ಜಿ.ಎಸ್., ಕುಮಿತೆಯಲ್ಲಿ ಪ್ರಥಮ ಮತ್ತು ಕಥಾ ವಿಭಾಗದಲ್ಲಿ ತೃತೀಯ ಸ್ಥಾನ. ಚಾಣಕ್ಯ ಬಿ.ಎಂ., ಕುಮಿತೆ ಮತ್ತು ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಪ್ರಥಮ ಆರ್.. ಕುಮಿತೆ ಮತ್ತು ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಚೇತನ್ ಹೆಚ್.ಹೆಚ್.. ಕುಮಿತೆ ಮತ್ತು ಕಥಾ ವಿಭಾಗದಲ್ಲಿ ತೃತೀಯ ಸ್ಥಾನ. ಚಿನ್ಮಯ್ ಕೆ.ಪಿ.. ಕುಮಿತೆಯಲ್ಲಿ ದ್ವಿತೀಯ, ಕಥಾ ವಿಭಾಗದಲ್ಲಿ ತೃತೀಯ ಸ್ಥಾನ. ಕಾರ್ತಿಕ್ ಎ., ಕುಮಿತೆ ವಿಭಾಗದಲ್ಲಿ ತೃತೀಯ, ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನ. ನಿಖಿಲ್ ಎನ್., ಕುಮಿತೆ ಮತ್ತು ಕಥಾ ವಿಭಾಗದಲ್ಲಿ ತೃತೀಯ ವಿದ್ವತ್ ವಿ.ಪಿ., ಚೇತನ್ ಡಿ. ಮತ್ತು ದೇವ್ ಚೌಧರಿ ಕಥಾ ವಿಭಾಗದಲ್ಲಿ ತೃತೀಯ ಕಾರ್ತಿಕ್ ಎಸ್.ಪಿ., ಕುಮಿತೆ ಮತ್ತು ಕಥಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.