ಹರಿಹರ, ಜು. 16 – ನಗರದಲ್ಲಿ ಬ್ಯಾಂಕ್ನಿಂದ ಹಣ ಬಿಡಿಸಿಕೊಂಡು ಬರುವ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆದು ಹಣವನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಆರೋಪಿತನಿಂದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ನಿರೀಕ್ಷ ದೇವಾನಂದ್ ತಿಳಿಸಿದರು.
ಕಾಳಿದಾಸ ಬಡಾವಣೆಯ ರಾಮಚಂದ್ರಪ್ಪ ಪಿ.ಬಿ. ರಸ್ತೆಯ ಎಸ್.ಬಿ.ಐ ಬ್ಯಾಂಕ್ ನಿಂದ ದಿ 6.3.2024 ರಂದು 6 ಲಕ್ಷ ರೂ. ಹಣವನ್ನು ಬಿಡಿಸಿಕೊಂಡು ತಮ್ಮ ಬೈಕ್ನ ಸೈಡ್ ಬ್ಯಾಗ್ನಲ್ಲಿ ಇಟ್ಟುಕೊಂಡು ಹೋಗುವಾಗ ತಮಿಳುನಾಡಿನ ಮದುನ್ ಎಂಬಾತ ರಾಮಚಂದ್ರಪ್ಪನವರ ಗಮನಕ್ಕೆ ಬಾರದಂತೆ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ. ಈತನನ್ನು ನಿನ್ನೆ ಅನುಮಾನಾಸ್ಪದದ ಮೇಲೆ ಹಿಡಿದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆತನಿಂದ 2.50 ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಆರೋಪಿತನನ್ನು ಪತ್ತೆ ಮಾಡಲು ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಜಿ.ಎಸ್. ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾ ಗಿದೆ. ಆರೋಪಿಯನ್ನು ಪತ್ತೆ ಮಾಡಿ ಹಣವನ್ನು ವಶಪಡಿ ಸಿಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಡಿಷನಲ್ ಎಸ್ಪಿ ವಿಜಯಕುಮಾರ್ ಸಂತೋಷ, ಮಂಜುನಾಥ್ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಈ ಸಂದರ್ಭದಲ್ಲಿ ಪಿಎಸ್ಐಗಳಾದ ಜಿ.ಎಸ್. ವಿಜಯಕುಮಾರ್, ಶ್ರೀಪತಿ ಗಿನ್ನಿ, ಎಎಸ್ಐ ಮೈಕೆಲ್ ಆಂಥೋನಿ, ಸಿಬ್ಬಂದಿಗಳಾದ ನಾಗರಾಜ್ ಸುಣಗಾರ್, ಆರ್ ರವಿ, ಹೆಚ್ ಸಿದ್ದೇಶ್, ಬಿ.ಎಸ್. ಹೇಮಾನಾಯ್ಕ್, ಕೆ.ಸಿ. ರುದ್ರಸ್ವಾಮಿ, ಹನುಮಂತ ಗೋಪನಾಳ, ಟಿ.ವಿ. ಸತೀಶ್, ಚಾಲಕ ರಂಗನಾಥ, ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ಶಾಂತರಾಜ್, ಮಜೀದ್, ರಾಘವೇಂದ್ರ, ಆಂಜನೇಯ, ರಮೇಶ್ ನಾಯ್ಕ್, ಬಾಲಾಜಿ ಇವರನ್ನೊಳಗೊಂಡ ತಂಡವು ಆರೋಪಿತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.