ವಿದ್ಯಾರ್ಥಿಗಳ ದಾಖಲಾತಿಗಾಗಿ ಮನೆಗಳಿಗೆ ತೆರಳಿದ ಉಪನ್ಯಾಸಕರು

ವಿದ್ಯಾರ್ಥಿಗಳ ದಾಖಲಾತಿಗಾಗಿ ಮನೆಗಳಿಗೆ ತೆರಳಿದ ಉಪನ್ಯಾಸಕರು

ಮಲೇಬೆನ್ನೂರು ಜು,16- ಕುಂಬಳೂ ರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ತರಗತಿಗೆ ವಿದ್ಯಾರ್ಥಿ ಗಳನ್ನು ದಾಖಲಾತಿ ಮಾಡಿಕೊಳ್ಳಲು ಕಾಲೇಜಿನ ಉಪನ್ಯಾಸಕರು ಮತ್ತು ಕಾಲೇಜು ಅಭಿವೃಧ್ದಿ ಸಮಿತಿ ಸದಸ್ಯರು ಮನೆಗಳಿಗೆ ತೆರಳಿದ ಘಟನೆ ನಡೆದಿದೆ.

ಹತ್ತನೇ ತರಗತಿಯ ಫಲಿತಾಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರಥಮ ಪಿಯು ತರಗತಿಗೆ ದಾಖಲಾತಿ ಕೊರತೆಯಾಗಿದ್ದು, ಎಸ್‍ಎಸ್‍ಎಲ್‍ಸಿ ಫಲಿತಾಂಶ-2 ಪ್ರಕಟವಾದ ಹಿನ್ನೆಲೆಯಲ್ಲಿ ಜಿಗಳಿ, ಗುಡ್ಡದ ಬೇವಿನಹಳ್ಳಿ, ನಿಟ್ಟೂರು ಮತ್ತು ಕುಂಬಳೂರು ಗ್ರಾಮಗಳ ಯೋಗೀಶ್, ವಜ್ರ, ಮಾರುತಿ, ಶರತ್, ಭಾಗ್ಯ, ನಯನ, ಗಂಗಾ ಎಂಬ ವಿದ್ಯಾರ್ಥಿಗಳ ಮನೆಗೆ ತೆರಳಿ ಕಾಲೇಜು ಇಲಾಖೆಯ ಸೌಲಭ್ಯಗಳನ್ನು ತಿಳಿಸಿ ಮನವೊಲಿಸಿದರು.

ಪ್ರಭಾರ ಪ್ರಾಂಶುಪಾಲ ಹನುಮಂತಯ್ಯ, ಉಪನ್ಯಾಸಕರಾದ ಮರುಳಸಿದ್ದಪ್ಪ, ಲತಾ, ಸಿಬಿಸಿ ಸದಸ್ಯರಾದ ಎನ್. ಕಲ್ಲೇಶ್ ಬಾಬು, ಬೆನ್ನೂರು ರಮೇಶ್, ಹೆಚ್.ಎಂ.ಸದಾನಂದ, ವೈ. ಶ್ರೀನಿವಾಸಮೂರ್ತಿ ಮತ್ತಿತರರು ಈ ತಂಡದಲ್ಲಿದ್ದರು. 2018ರಲ್ಲಿಯೂ ಪ್ರಥಮ ಪಿಯುಗೆ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆಯಾದಾಗಲೂ  ಇದೇ ತಂಡ ಪಾದಯಾತ್ರೆ ನಡೆಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

error: Content is protected !!