ದಾವಣಗೆರೆ, ಜು.14- ವಿದ್ಯಾರ್ಥಿ ಸಂಸತ್ತಿನ ಪರಿಕಲ್ಪನೆಯಿಂದ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಯಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ನಗರದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಧನಾತ್ಮಕ ಗುಣ ಬೆಳೆಸಲು ವಿದ್ಯಾರ್ಥಿ ಸಂಸತ್ ಸಹಾಯಕಾರಿಯಾಗಿದೆ ಆದ್ದರಿಂದ ಮಕ್ಕಳು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಜಾಪ್ರಭುತ್ವದ ಅರಿವು ಮೂಡಿಸಲು, ಅನಿಸಿಕೆ ವ್ಯಕ್ತಪಡಿಸಲು ಹಾಗೂ ಉತ್ತಮ ಕಲಿಕೆಯ ವಾತಾವರಣ ಕಲ್ಪಿಸುವಲ್ಲಿ ವಿದ್ಯಾರ್ಥಿ ಸಂಸತ್ ಮಹತ್ವದ ಪಾತ್ರವಹಿಸುತ್ತದೆ ಎಂದರು.
ಪ್ರಾಚಾರ್ಯ ಎಚ್.ವಿ. ಯತೀಶ್ ಎಲ್ಲಾ ಸದಸ್ಯರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
(ಇ.ಆರ್. ವೇಣುಗೋಪಾಲ್) ಶಾಲಾ ನಾಯಕ, (ಎ. ಅನ್ವಯಿ) ಶಾಲಾ ನಾಯಕಿ, (ರಿಷಿಕ್ ಎನ್. ಜಾದವ್) ಕ್ರೀಡಾ ನಾಯಕ, (ಪರಿಮಳ ಪ್ರಸಾದ್ ಜಿ) ಸಾಂಸ್ಕೃತಿಕ ನಾಯಕಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಈ ವೇಳೆ ಉಮಾ ಪ್ರಶಾಂತ್ ಅವರು ಶಾಲಾ ವಿದ್ಯಾರ್ಥಿ ಪರಿಷತ್ತಿನ 12 ಸದಸ್ಯರಿಗೆ ಬ್ಯಾಡ್ಜ್ ಮತ್ತು ಸ್ಯಾಶೆ ನೀಡಿ ಹಾರೈಸಿದರು.
ಕಾರ್ಯಕ್ರಮದಲ್ಲಿ ಪಿ.ಬಿ. ಪ್ರಕಾಶ್, ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ಪಾಲಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆರ್.ಎಂ. ಚೈತನ್ಯ ಮತ್ತು ಪರಿಣಿಕ ನಿರೂಪಿಸಿದರು. ಎ. ದರ್ಶನ್ ಸ್ವಾಗತಿಸಿದರು. ಶಾಲಾ ನಾಯಕಿ ಎ ಅನ್ವಯಿ ವಂದಿಸಿದರು.