4.33 ಕೋಟಿ ವೆಚ್ಚದ ವಸತಿ ನಿಲಯ ಕಟ್ಟಡಕ್ಕೆ ಭೂಮಿ ಪೂಜೆ

4.33 ಕೋಟಿ ವೆಚ್ಚದ ವಸತಿ ನಿಲಯ ಕಟ್ಟಡಕ್ಕೆ ಭೂಮಿ ಪೂಜೆ

ಜಗಳೂರು, ಜು.14- ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 4.33 ಕೊಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿ ರುವ ವಸತಿ ನಿಲಯ ನಿರ್ಮಾಣ ಕಾಮಗಾರಿ ಗುಣಮಟ್ಟವಾಗಿರಲಿ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ಜಗಳೂರು ಪಟ್ಟಣದ ಎಸ್.ಎಸ್ ಲೇಔಟ್‌ನಲ್ಲಿ ಡಾ ಬಾಬು ಜಗಜೀವನ್ ರಾಂ ಛಾತ್ರನಿವಾಸ್ ಯೋಜನೆಯಲ್ಲಿ 4 ಕೋಟಿ 33 ರೂ. ವೆಚ್ಚದ ಸಮಾಜ ಕಲ್ಯಾಣ ಇಲಾಖೆ ಬಾಲಕರ ವಸತಿ ನಿಲಯ ಕಟ್ಟಡ ನಿರ್ಮಾಣ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗುತ್ತಿಗೆದಾರರಾದ ಅಪ್ಪಾಜಿ ಬಿಲ್ಡರ್ಸ್ ಬೆಂಗಳೂರು ಇವರು ಮುಂದಿನ ವರ್ಷಕ್ಕೆ ವಸತಿ ನಿಲಯ ಪೂರ್ಣ ಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು. 

ಕಳಪೆ ಕಾಮಗಾರಿ ಮಾಡದೇ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಹಲವು ಸಮಸ್ಯೆಗಳಿವೆ.   

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಸರಿಯಾಗಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸಬೇಕು.  

ವಿದ್ಯಾರ್ಥಿಗಳಿಗೆ ಉತ್ತಮ ಊಟ ತಿಂಡಿ ಹಾಗೂ ಮೂಲ ಭೂತ ಸೌಲಭ್ಯಗಳನ್ನು ಒದಗಿ ಸಬೇಕು ಎಂದು  ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್ ಅವರಿಗೆ ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ರಮೇಶ್, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಡಿ.ಡಿ. ನಾಗರಾಜ್, ಪ.ಪಂ. ಮುಖ್ಯಾಧಿಕಾರಿ ಲೋಕನ್ಯಾಯ್ಕ್, ಬಿ.ಮಹೇಶ್ವರಪ್ಪ, ನಿಲಯ ಪಾಲಕರಾದ ಮಹಾಬಲೇಶ್, ದೇವೇಂದ್ರಪ್ಪ  ಮುಂತಾದವರು ಇದ್ದರು.

error: Content is protected !!