ದಾವಣಗೆರೆ, ಜು. 14 – ನಗರದ ವಸಂತ ರಸ್ತೆಯ ಹಾಲೇಶ್ವರ ಪ್ರಿಂಟಿಂಗ್ ಪ್ರೆಸ್ ಹಿಂಭಾಗದಲ್ಲಿರುವ ಶ್ರೀ ಉತ್ಸವಾಂಬ ದೇವಿ, ಶ್ರೀ ಚೌಡೇಶ್ವರಿ ದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ ದೇವಿ, ಶ್ರೀ ಮಹಾಲಕ್ಷ್ಮಿ ದೇವಿ ದೇವರುಗಳು 12ನೇ ವರ್ಷದ ಮಹಾ ಮಂಡಲಾಭಿಷೇಕವು ಇದೇ ದಿನಾಂಕ 17ರ ಬುಧವಾರದಿಂದ ಬರುವ ಸೆಪ್ಟೆಂಬರ್ 3ರ ಮಂಗಳವಾರದವರೆಗೆ ನಡೆಯಲಿದೆ. 48 ದಿನಗಳ ಕಾಲ ತಾಯಿಯವರಿಗೆ ಸರ್ವ ಭಕ್ತಾದಿಗಳಿಂದ ಮಹಾ ಅಭಿಷೇಕ ಇರುತ್ತದೆ. ಕೊನೆಯ ದಿನದಂದು ಬೆಳಗಿನ ಜಾವ ಅಮ್ಮನವರಿಗೆ ಮಹಾ ಪೂಜೆ ಮತ್ತು ಮಧ್ಯಾಹ್ನ 12.30 ಕ್ಕೆ ಪ್ರಸಾದ ವಿನಿಯೋಗವಿರುತ್ತದೆ.
January 15, 2025