ಮಲೇಬೆನ್ನೂರಿನಲ್ಲಿ ಜನಸಂಖ್ಯಾ ದಿನಾಚರಣೆ ಜಾಥಾ

ಮಲೇಬೆನ್ನೂರಿನಲ್ಲಿ ಜನಸಂಖ್ಯಾ ದಿನಾಚರಣೆ ಜಾಥಾ

ಮಲೇಬೆನ್ನೂರು, ಜು. 14 – ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಪುರಸಭೆ ಸದಸ್ಯ ಸಾಬೀರ್ ಅಲಿ, ಜನಸಂಖ್ಯೆ ನಿಯಂತ್ರಣದಿಂದ ಕುಟುಂಬ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಮಿತಿಮೀರಿದ ಜನಸಂಖ್ಯೆ ಬೆಳವಣಿಗೆ ದೇಶಕ್ಕೆ ಆರ್ಥಿಕ ಹಿನ್ನಡೆ ಉಂಟು ಮಾಡುತ್ತದೆ. ಜನಸಂಖ್ಯಾ ಬೆಳವಣಿಗೆಯಿಂದ ಬಡತನ ಹಾಗೂ ಅನಕ್ಷರತೆ ಪ್ರಮಾಣವೂ ಕೂಡ ಹೆಚ್ಚಾಗುತ್ತದೆ. ಇದರಿಂದ ಕುಟುಂಬಗಳು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ,  ವೈದ್ಯ  ಡಾ. ನಿಸಾರ್, ಪುರಸಭೆ ನಾಮಿನಿ ಸದಸ್ಯ ದೊಡ್ಮನಿ ಬಸವರಾಜ್ ಸೇರಿದಂತೆ  ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

error: Content is protected !!