ಹೊನ್ನಾಳಿ ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಗೀತಮ್ಮ

ಹೊನ್ನಾಳಿ ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಗೀತಮ್ಮ

ಹೊನ್ನಾಳಿ, ಜು. 15 –  ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕೊನಾಯಕನಹಳ್ಳಿ ಶಾಲಾ ಶಿಕ್ಷಕಿ ಜಿ. ಗೀತಮ್ಮ ದೊಡ್ಡಪ್ಪ, ಉಪಾಧ್ಯಕ್ಷರಾಗಿ ಚನ್ನೇನಹಳ್ಳಿ ಶಾಲಾ ಶಿಕ್ಷಕಿ  ಕೆ.ಬಿ. ನೀಲಮ್ಮ ಆಂಜನೇಯ ಇವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿರುವುದಾಗಿ ಅಕ್ಷರ ದಾಸೋಹ ನಿರ್ದೇಶಕ ರುದ್ರಪ್ಪ ತಿಳಿಸಿರುವರು. 9 ಸದಸ್ಯರ ಬಲವಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ 6 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, 3 ಸದಸ್ಯರು ಗೈರಾಗಿದ್ದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ, ರುದ್ರೇಶ್, ಪ್ರಕಾಶ್ ನಾಯ್ಕ, ಅಪ್ಸರ್ ಅಲಿ ಖಾನ್, ರಾಮಪ್ಪ, ದೊಂಕತ್ತಿ ನಾಗರಾಜ, ಜಿ. ದೊಡ್ಡಪ್ಪ, ಸಿದ್ದಪ್ಪ ಇನ್ನಿತರರಿದ್ದರು.

error: Content is protected !!