ನಾಳೆ ಪೂಜಾನುಷ್ಟಾನ ಮಂಗಲ

ನಾಳೆ ಪೂಜಾನುಷ್ಟಾನ ಮಂಗಲ

ದಾವಣಗೆರೆ, ಜು. 14- ಶ್ರೀಕ್ಷೇತ್ರ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಷಾಢ ಮಾಸದ ಅಂಗವಾಗಿ, ಶ್ರೀಕ್ಷೇತ್ರನಾಥ ಶ್ರೀ ವೀರಭದ್ರೇಶನ ಆಣತಿ ಯಂತೆ ಲೋಕಕಲ್ಯಾಣಕ್ಕಾಗಿ, ಶ್ರೀಮಠದ ಜೀರ್ಣೋ ದ್ಧಾರಕ್ಕಾಗಿ, ಮಳೆ – ಬೆಳೆ ಸಮೃದ್ಧಿಗಾಗಿ ಕೈಗೊಂಡಿರುವ ಪೂಜಾ ತಪೋನುಷ್ಠಾನವನ್ನು ನಾಡಿದ್ದು ದಿನಾಂಕ 16 ರ ಮಂಗಳವಾರ  ಬ್ರಾಹ್ಮೀ ಮೂಹೂರ್ತದಲ್ಲಿ ಸಮಾರೋಪಗೊಳಿಸಲಿದ್ದಾರೆ.

ತಪೋನುಷ್ಠಾನದ ಪ್ರಯುಕ್ತ ಪ್ರಾತಃಕಾಲ 3 ಗಂಟೆಯಿಂದ ಸುಮಂಗಲೆಯರಿಂದ ಗಂಗಾಪೂಜೆಯೊಂದಿಗೆ ಕುಂಭೋತ್ಸವ, ನಂತರ ಪೂಜ್ಯರ ಇಷ್ಟಲಿಂಗ ಮಹಾಪೂಜೆಯೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ಕ್ಷೇತ್ರಾಧಿದೇವ ಕನ್ನೇಶ್ವರನಿಗೆ, ಶ್ರೀಕ್ಷೇತ್ರನಾಥ ಶ್ರೀ ವೀರಭದ್ರೇಶನಿಗೆ ಏಕಾದಶ ರುದ್ರಾಭಿಷೇಕ, ಶ್ರೀ ಶಿವಾಷ್ಟೋತ್ತರ ಶತನಾಮಾವಳಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಅಷ್ಟೋತ್ತರ ಶತನಾಮಾವಳಿ, ಶ್ರೀ ವೀರಭದ್ರೇಶ್ವರ ಅಷ್ಟೋತ್ತರ ಶತನಾಮಾವಳಿ ಪೂಜಾ, ನಂತರ ಪೂಜ್ಯರು ಶ್ರೀ ಜ. ರೇಣುಕಾರ್ಯರ ಶಿಲಾ ಪಾದು ಕವನ್ನು ಮಸ್ತಕದಿ ಧರಿಸಿ ಜಪಗೈಯ್ಯುವರು.

ನಂತರ ಮಹಾ ಮಂಗಳಾರುತಿ ನಂತರ ಶ್ರೀರಾಮಘಟ್ಟದ ಪೂಜ್ಯರ ಪಾದ ಪೂಜೆಯೊಂದಿಗೆ ಶ್ರೀ ಸ್ವಾಮಿಯನ್ನ ಕ್ರಿಯಾ ಪಾದೋದಕ ಪ್ರಸಾದದಿಂದ ಸಂಪ್ರೀತನಗೊಳಿಸಿ ನಂತರ ಸಮಯ 6 ಗಂಟೆಯಿಂದ 8.30 ರವರೆಗೆ ಶ್ರೀಗಣ ಹೋಮ, ಶ್ರೀರುದ್ರ ಹೋಮ, ಶ್ರೀಚಂಡೀ ಹೋಮ, ಬೃಹಸ್ಪತಿ ಹೋಮ, ನವಗ್ರಹ ಹೋಮಗಳು ನಡೆದು ಗ್ರಾಮ ಪೂರ್ಣಾಹುತಿ ನೀಡಿ ಗ್ರಾಮ ದೇವತೆಯರಿಗೆ,  ತಾಯಂದಿರಿಗೆ, ಸುಮಂಗಲೆಯರಿಗೆ ಉಡಿ ತುಂಬಿಸುವುದು, ನಂತರ ಮಠಸ್ಥರ, ಜಂಗಮ ಮಾಹೇಶ್ವರ ಗಣಾರಾಧನೆ ನಡೆದು ಅನ್ನ ದಾಸೋಹ ಮಹಾಪ್ರಸಾದೊಂದಿಗೆ ಮಂಗಲವಾಗುವುದು. 

error: Content is protected !!