ದಾವಣಗೆರೆ, ಜು.12- ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಯೂರಿಯಾ ಗೊಬ್ಬರ ಬಳಸುವಾಗ ಸೂಕ್ತ ಎಚ್ಚರಿಕೆ ಪಾಲಿಸಬೇಕು.
ಪ್ರತಿ ಎಕರೆ ಖುಷ್ಕಿ ಮುಸುಕಿನ ಜೋಳಕ್ಕೆ 25 ಕೆ.ಜಿ ಯೂರಿಯಾ ಬಳಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ ಬೆಳೆ ಹಾನಿಯಾಗಲಿದೆ. ಆದ್ದರಿಂದ ರೈತರು ಸಲಹೆ ಪಾಲಿಸುವಂತೆ ಕೃಷಿ ಇಲಾಖೆ ತಿಳಿಸಿದೆ.