ದಾವಣಗೆರೆ, ಜು.11- ಕೆಪಿಟಿಸಿಇಎಲ್ ಇಇ ಡಿ.ಎಚ್. ಉಮೇಶ್, ಎಇಇ ಪ್ರಭಾಕರ್ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಬಗ್ಗೆ ದೂರುದಾರರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಒಟ್ಟು ಎಂಟು ಕಡೆ ದಾವಣಗೆರೆ ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆದಿದೆ.
ನಗರದಲ್ಲಿರುವ ಉಮೇಶ್ ಅವರ ಭವ್ಯ ಬಂಗಲೆ, ಶಿವಕುಮಾರಸ್ವಾಮಿ ಬಡಾವಣೆ ಎರಡನೇ ಹಂತದ ಲ್ಲಿರುವ ಮನೆ, ಲೋಕಾಯುಕ್ತ ಪಿಐ ಎಚ್ಎಸ್ ರಾಷ್ಟ್ರಪತಿ ಆವರಗೆರೆಯಲ್ಲಿರುವ ಹೊಸ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿ ಲೋಕಾಯುಕ್ತ ಪಿಐ ಸಂಗಮೇಶ್ ನಗರದಲ್ಲಿರುವ ಕೆಐಎಡಿಬಿ ಉಗ್ರಾಣದ ಮೇಲೆ ದಾಳಿ ನಡೆಸಿದ್ದಾರೆ.
ದಾವಣಗೆರೆ ಬೆಸ್ಕಾಂ ವಿಜಿಲೆನ್ಸ್ ಅಧಿಕಾರಿ ಎಇಇ ಪ್ರಭಾಕರ್ ಮನೆ ಮೇಲೂ ದಾಳಿ ನಡೆಸಲಾಗಿದೆ. ದಾವಣಗೆರೆ ಡಿಎಸ್ಪಿ ಕಲಾವತಿ ಗದಗ ಪಿಐ ಪುರುಷೋತ್ತಮ ದಾವಣಗೆರೆ ಎಂಸಿಸಿ ಎ ಬ್ಲಾಕ್ ನ 13 ನೇ ಮೇನ್ ನಲ್ಲಿರುವ ವಾಸದ ಮನೆ, ಹಾವೇರಿ ಡಿಎಸ್ಪಿ ಬಿ.ಪಿ.ಚಂದ್ರಶೇಖರ್ ತರಳಬಾಳು ಬಡಾವಣೆಯಲ್ಲಿರುವ ಮಾವನ ಮನೆ ಬಳ್ಳಾರಿ ಲೋಕಾಯುಕ್ತ ಮಹಮ್ಮದ್ ರಫೀಕ್ ಬೆಸ್ಕಾಂ ವಿಜಿಲೆನ್ಸ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.