ಹರಪನಹಳ್ಳಿ,ಜು. 10 – ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪುರಸಭೆ ಮಾಜಿ ಅಧ್ಯಕ್ಷ ಎಂ.ರಾಜಶೇಖರ್ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಚಿರಸ್ಥಳ್ಳಿಯ ಮಲ್ಲಿಕಾರ್ಜುನ ಕಲ್ಮಠ, ಎಲ್.ಕೊಟ್ರೇಶಪ್ಪ, ಸಿ.ಎಂ.ಕೊಟ್ರಯ್ಯ, ಎಚ್.ಎಂ.ಜಗದೀಶ, ದೊಡ್ಡಬಸವರಾಜ, ಪುರಸಭೆ ಸದಸ್ಯ ಗೊಂಗಡಿ ನಾಗರಾಜ, ಪಿ.ಬಿ.ಗೌಡ, ಪಿ.ಬಸವರಾಜ, ಮುನಿಯಪ್ಪ, ಕಾನಹಳ್ಳಿ ಪಿ.ರುದ್ರಪ್ಪ, ಕಡೇಮನಿ ಸಂಗಮೇಶ, ಶೇಖರಗೌಡ ಪಾಟೀಲ್, ಕೆ.ಎಂ.ಶಿವಕುಮಾರಸ್ವಾಮಿ, ಮಹಿಳಾ ಸದಸ್ಯರುಗಳಾಗಿ ಅನುರಾಧ ಕೊಟ್ರೇಶ, ಅಕ್ಷತ ಕೊಟ್ರೇಶ, ಚೆನ್ನಮ್ಮ ಎಂ.ಕೆ, ನಂದಿನಿ, ಎಂ.ಪ್ರಭಾ ಅಜ್ಜಣ್ಣ, ವೀಣಾ ಬಿ.ಎನ್, ಸುಮಾ. ವೈ.ಎಂ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯನ್ನು ಚುನಾವಣಾಧಿಕಾರಿ ಬಿ.ಸಿ. ಗೌರಿಶಂಕರ ಘೋಷಿಸಿದರು.